ಇದೀಗ ಅಂಟಾರ್ಟಿಕಾದಿಂದ ಆತಂಕಕಾರಿ ಸುದ್ದಿಯೊಂದು ಬಂದಿದೆ. ಹವಾಮಾನ ಬದಲಾವಣೆಯಿಂದಾಗಿ, ಬೆಚ್ಚಗಿನ ನೀರು ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಕಡೆಗೆ ಚಲಿಸುತ್ತಿದೆ. ಈ ಮಂಜುಗಡ್ಡೆಯು ಗಾತ್ರದಲ್ಲಿ ಯುನೈಟೆಡ್ ಸ್ಟೇಟ್ಸ್‌ಗಿಂತ ದೊಡ್ಡದಾಗಿದೆ. ಪೂರ್ವ ಅಂಟಾರ್ಕ್ಟಿಕ್ ಐಸ್ ಶೀಟ್ ಕಡೆಗೆ ಬೆಚ್ಚಗಿನ ನೀರು ಹರಿಯುತ್ತಿದೆ. ಇದು ಜಾಗತಿಕ ಸಮುದ್ರ ಮಟ್ಟ ಏರಿಕೆಯನ್ನು ಸೂಚಿಸುತ್ತದೆ. ಸಮುದ್ರ ಮಟ್ಟವು ಏರಿದರೆ. ಸಮುದ್ರ ಜೀವಿಗಳು ಸಹ ಹಾನಿಗೊಳಗಾಗಬಹುದು. ಇದರೊಂದಿಗೆ ಸಮುದ್ರ ತೀರದಲ್ಲಿರುವ ಜನವಸತಿಗಳೂ ಮುಳುಗಡೆಯಾಗಲಿವೆ.