ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿ ಆಗುವ ಅನಾಹುತ ತಡೆಯಲು ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಮೊದಲನೆಯದಾಗಿ ಅಂಡರ್ ಪಾಸ್‌ನ ಇಳಿಯುವ ಮತ್ತು ಏರುವ ಎರಡೂ ಕಡೆಗಳಲ್ಲಿ ಪ್ರತ್ಯೇಕ ಚರಂಡಿಗಳನ್ನು ನಿರ್ಮಾಣ ಮಾಡುವುದು, ಅದನ್ನು ನೇರವಾಗಿ ರಾಜಕಾಲುವೆಗೆ ಸಂಪರ್ಕಿಸುವುದು.
ಎರಡನೆಯದಾಗಿ, ಮಳೆ ನೀರು ಸೇತುವೆಗೆ ಹೋಗದಂತೆ ತಡೆಯಲು ಅಂಡರ್ ಪಾಸ್ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿ ನಿರ್ಮಾಣ ಮಾಡುವುದು. ಮೂರನೆಯದಾಗಿ ಕೆಳಸೇತುವೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವುದು, ವರ್ಟಿಕಲ್ ಕ್ಲಿಯರೆನ್ಸ್ ಗೇಜ್ ಬೀಮ್ ಅನ್ನು ಅಳವಡಿಸುವುದು ಮತ್ತು ಬೂಮ್ ಬ್ಯಾರಿಯರ್ ಅಳವಡಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ.15 ದಿನಗಳಲ್ಲಿ ಕಾಮಗಾರಿ ಮುಗಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಆದೇಶ ನೀಡಿದ್ದಾರೆ. ಮೇಕ್ರಿ ಸರ್ಕಲ್, ಕಾವೇರಿ ಜಂಕ್ಷನ್ ಮತ್ತು ಕದಿರೇನಹಳ್ಳಿ, ಮಾರತ್ತಹಳ್ಳಿ ಅಂಡರ್‌ಪಾಸ್ ಮತ್ತು ನಾಯಂಡಹಳ್ಳಿಯ ಕಿನೋ ಥಿಯೇಟರ್‌ಸಮೀಪವಿರುವ ಅಂಡರ್ ಪಾಸ್‌ಗಳು ಸೇರಿ ಒಟ್ಟು 30 ಅಂಡರ್ ಪಾಸ್‌ಗಳಲ್ಲಿ 16 ಅಂಡರ್ ಪಾಸ್‌ಗಳು ಪ್ರವಾಹಕ್ಕೆ ತುತ್ತಾಗಲಿವೆ.