ಅಗತ್ಯಕ್ಕಿಂತ ಹೆಚ್ಚು ವಲಸಿಗರಿದ್ದ ಹಡಗು ಮುಳುಗಡೆ – 79 ಮಂದಿ ಜಲಸಮಾಧಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿರುವ ಘಟನೆ ಗ್ರೀಸ್‌ನ ಕರಾವಳಿ ಭಾಗದಲ್ಲಿ ನಡೆದಿದೆ.

ಜೂನ್‌14ರಂದು ರಾತ್ರಿ ಗ್ರೀಸ್‌ಕರಾವಳಿಯಿಂದ ಯುರೋಪ್‌ನತ್ತ ಹೊರಟಿದ್ದ ಹಡಗಿನಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದರು. ಮೀನುಗಾರಿಕೆ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನ ಕೂರಿಸಿದ್ದರಿಂದ ಹಡಗು ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಯುರೋಪಿಯನ್ ರಕ್ಷಣಾ ತಂಡದ ಪ್ರಕಾರ ಸುಮಾರು 750 ಮಂದಿ ಹಡಗಿನಲ್ಲಿದ್ದರು ಎನ್ನಲಾಗಿದೆ. ಆದ್ರೆ ಯುಎನ್‌ವಲಸಿಗ ಏಜೆನ್ಸಿ 400 ಮಂದಿ ಹಡಗಿನಲ್ಲಿದ್ದರು ಎಂದು ಹೇಳಿದೆ. ಹಡಗಿನಲ್ಲಿದ್ದ ಹೆಚ್ಚಿನ ಸಂಖ್ಯೆಯ ವಲಸಿಗರು ಈಜಿಪ್ಟ್, ಸಿರಿಯಾ ಮತ್ತು ಪಾಕಿಸ್ತಾನದಿಂದ ಬಂದವರು ಎಂದು ಹೇಳಲಾಗಿದೆ. ಕೂಡಲೇ ಕರಾವಳಿ ಪಡೆ, ನೌಕಾಪಡೆ ಅಧಿಕಾರಿಗಳು ದುರಂತ ನಡೆದ ಸ್ಥಳಕ್ಕೆ ಧಾವಿಸಿ, ಸಾಧ್ಯವಾದಷ್ಟು ಜನರನ್ನ ರಕ್ಷಿಸಿದ್ದಾರೆ. ಗ್ರೀಸ್‌ನಲ್ಲಿ ನಡೆದ ಈ ಹಡಗು ದುರಂತವನ್ನು ಪ್ರಸಕ್ತ ವರ್ಷದ ಮಹಾ ದುರಂತ ಎಂದೇ ಹೇಳಲಾಗುತ್ತಿದೆ. ಸಮುದ್ರದಲ್ಲಿ ಮುಳುಗಿದ್ದ 104ಕ್ಕೂ ಹೆಚ್ಚು ಜನರನ್ನ ರಕ್ಷಿಸಲಾಗಿದೆ. ಇನ್ನೂ ಸಾಕಷ್ಟು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ. ಶವಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *