ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ಪುಟಿನ್ ಅಣ್ವಸ್ತ್ರ ಬಳಸುವ ಬೆದರಿಕೆ ಬಗ್ಗೆ ಮಾತನಾಡಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ಪುಟಿನ್‌ಹಾಕಿರುವ ಬೆದರಿಕೆ ತಮಾಷೆಯಲ್ಲ. ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ರಷ್ಯಾ ಉಕ್ರೇನ್‌ಯುಧ್ಧದ ಕುರಿತು ಮಾತನಾಡಿದ್ದಾರೆ. ರಷ್ಯಾ ಅಣ್ವಸ್ತ್ರ ಬಳಸುವ ಬೆದರಿಕೆ ಹಾಕಿದೆ, ಈ ಬೆದರಿಕೆ ತಮಾಷೆಯಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ಪುಟಿನ್‌ಅಣ್ವಸ್ತ್ರ ಬಳಕೆ ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ. ಯುರೋಪ್‌ಮತ್ತು ಪಾಶ್ಚಿಮಾತ್ಯ ದೇಶಗಳ ಸಹಾಯದಿಂದ ರಷ್ಯಾವನ್ನು ಉಕ್ರೇನ್ ಹಿಮ್ಮೆಟ್ಟಿಸಿದೆ. ಇದೇ ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಅಣ್ವಸ್ತ್ರ ಪ್ರಯೋಗಿಸಲು ಮುಂದಾಗುವಂತೆ ಮಾಡಿದೆ. ಉಕ್ರೇನ್‌ಬಳಿ ಯಾವುದೇ ಅಣ್ವಸ್ತ್ರವಿಲ್ಲ. ಇದ್ದ ಅಣ್ವಸ್ತ್ರಗಳನ್ನು ದಶಕದ ಹಿಂದೆ ರಷ್ಯಾಗೆ ಹಸ್ತಾಂತರಿಸಿದೆ.