ಅದಾನಿ ಎಂಟರ್‌ಪ್ರೈಸ್‌ಷೇರು ರಾಕೆಟ್‌ವೇಗದಲ್ಲಿ ಮೇಲೇಳುತ್ತಿದೆ

ಹಿಂಡೆನ್‌ಬರ್ಗ್‌ಸಂಶೋಧನಾ ವರದಿಯಿಂದ ಪಾತಾಳ ಕಂಡಿದ್ದ ಅದಾನಿ ಸಮೂಹ ಕಂಪನಿಗಳ ಷೇರುಗಳು ಈಗ ಮೇಲಕ್ಕೆ ಏರುತ್ತಿದೆ. ಅದರಲ್ಲೂ ಅದಾನಿ ಎಂಟರ್‌ಪ್ರೈಸ್‌ಷೇರು ರಾಕೆಟ್‌ವೇಗದಲ್ಲಿ ಮೇಲೇಳುತ್ತಿದೆ. ಅದಾನಿ ಸಮೂಹ ಯಾವುದೇ ರೀತಿಯಲ್ಲೂ ಷೇರಿನ ಬೆಲೆಗಳನ್ನು ತಿರುಚಿಲ್ಲ. ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಕಡೆಯಿಂದಲೂ ಯಾವುದೇ ನಿಯಂತ್ರಣ ವೈಫಲ್ಯವೂ ಕಂಡುಬಂದಿಲ್ಲ ಎಂದು ಸುಪ್ರೀಂ ನೇಮಿಸಿದ ಸಮಿತಿಯ ವರದಿ ಶುಕ್ರವಾರ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಬೆಲೆ ಸೋಮವಾರದಿಂದ ಏರಿಕೆಯಾಗುತ್ತಿದೆ. ಅದಾನಿ ಎಂಟರ್‌ಪ್ರೈಸ್‌ಷೇರು ಬೆಲೆ ಇಂದು ಒಂದೇ ದಿನ 307 ರೂ. ಏರಿಕೆ ಕಂಡು ಕೊನೆಗೆ 2,333.70 ರೂ.ನಲ್ಲಿ ವ್ಯವಹಾರ ಮುಗಿಸಿದೆ. ಶುಕ್ರವಾರ 1956 ರೂ.ನಲ್ಲಿ ಕೊನೆಯಾಗಿದ್ದರೆ ಎರಡು ದಿನದ ವ್ಯವಹಾರದಲ್ಲಿ 677 ರೂ. ಏರಿಕೆಯಾಗಿದೆ. ಇಂದಿನ ವ್ಯವಹಾರದಲ್ಲಿ ಅದಾನಿ ಟ್ರಾನ್ಸ್‌ಮಿಷನ್‌ಒಂದು ಷೇರಿನ ಬೆಲೆ 41 ರೂ., ಅದಾನಿ ಗ್ರೀನ್‌ಎನರ್ಜಿ ಬೆಲೆ 47 ರೂ. ಏರಿಕೆಯಾಗಿದೆ. ಅದಾನಿ ಪವರ್‌12 ರೂ., ಅದಾನಿ ಪೋರ್ಟ್‌8 ರೂ. ಏರಿಕೆಯಾಗಿದೆ.

Leave a Reply

Your email address will not be published. Required fields are marked *