ಅದಾನಿ ಗ್ರೂಪ್‌ಮೇಲಿನ ಆರೋಪದ ವಿರುದ್ಧ ಜೆಪಿಸಿ ತನಿಖೆಗೆ ವಿರೋಧ ಪಕ್ಷಗಳ ಆಗ್ರಹ

ನ್ಯೂಯಾರ್ಕ್‌ಮೂಲದ ಕಂಪನಿ ಹಿಂಡೆನ್‌ಬರ್ಗ್‌ರಿಸರ್ಚ್‌, ಉದ್ಯಮಿ ಗೌತಮ್‌ಅದಾನಿ ಅವರ ಕಂಪನಿಗಳ ಮೇಲೆ ಷೇರುಗಳ ಮೌಲ್ಯವನ್ನು ಬುದ್ದಿವಂತಿಕೆಯಿಂದ ಬದಲಾಯಿಸಿದ ಹಾಗೂ ಹಣಕಾಸು ಅವ್ಯವಹಾರವನ್ನು ಮಾಡಿದ ಆರೋಪ ಹೊರಿಸಿತ್ತು. ಗುರುವಾರ ಸಂಸತ್‌ಕಲಾಪದಲ್ಲಿ ವಿರೋಧಪಕ್ಷಗಳು ಒಗ್ಗಟ್ಟಾಗಿ, ಹಿಂಡೆನ್‌ಬರ್ಗ್‌ವರದಿಯ ಕುರಿತಾಗಿ ಚರ್ಚೆ ನಡೆಸುವಂತೆ ಆಗ್ರಹ ಮಾಡಿದವು. ಸಂಸತ್‌ಕಲಾಪಕ್ಕೆ ಕೂಡ ಈ ಗಲಾಟೆಯಿಂದ ಅಡ್ಡಿಯಾಯಿತು. ಸಾಕಷ್ಟು ವಿರೋಧ ಪಕ್ಷಗಳ ನಾಯಕರು ಗುರುವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಭೇಟಿಯಾಗಿ, ಕಲಾಪದಲ್ಲಿ ಈ ವಿಚಾರವನ್ನು ಹೇಗೆ ಮುನ್ನಲೆಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಿದವು. ಇಡೀ ವಿವಾದದ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ಸ್ಥಾಪಿಸಲು ಪ್ರತಿಪಕ್ಷಗಳು ಒತ್ತಾಯಿಸಬೇಕು. ಎಂದು ಹಲವಾರು ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನಲ್ಲಿ ಬಿಜೆಪಿಯ ಸಂಖ್ಯಾಬಲದ ಆಧಾರದ ಮೇಲೆ ಜೆಪಿಸಿ ರಚನೆಯು ಆಡಳಿತದ ಪರವಾಗಿ ವಾಲುತ್ತದೆ ಎಂದು ಭಾವಿಸಿದ ಕೆಲವು ನಾಯಕರು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖಾ ಸಮಿತಿ ರಚನೆ ಮಾಡುವ ಪರವಾಗಿದ್ದಾರೆ.ಸಮಾಜವಾದಿ ಪಕ್ಷದ ರಾಮ್‌ಗೋಪಾಲ್‌ಯಾದವ್‌, ತೃಣಮೂಲ ಕಾಂಗ್ರೆಸ್‌ಪಕ್ಷದ ಡರೇಕ್‌ಓಬ್ರಿಯಾನ್,‌ಎನ್‌ಸಿಪಿಯ ವಂದನಾ ಚೌಹಾಣ್‌, ಶಿವಸೇನೆ ಉದ್ಧವ್‌ಠಾಕ್ರೆ ಘಟಕದ ಸಂಜಯ್‌ರಾವುತ್‌, ಡಿಎಂಕೆ ಪಕ್ಷದ ಕನಿಮೋಳಿ, ಸಿಪಿಎಂನ ಎಲಾಮಾರಮ್‌ಕರೀಮ್‌, ಆಪ್‌ನ ಸಂಜಯ್‌ಸಿಂಗ್‌ಹಾಗೂ ಸಿಪಿಐನ ಬಿನೋಯ್‌ವಿಶ್ವಮ್‌ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *