ಕೇಂದ್ರದಲ್ಲಿ ಸರ್ಕಾರ ಹಾಗೂ ವಿಪಕ್ಷ ನಡುವೆ ಅದಾನಿ ಪ್ರಕರಣ ಜಟಾಪಟಿ ತೀವ್ರಗೊಳ್ಳುತ್ತಿದೆ. ಅಧಿವೇಶನದ ಸದನದಲ್ಲಿ ಅದಾನಿ ಹಗರಣದ ಜೆಪಿಸಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸತತ 3ನೇ ದಿನವೂ ಗದ್ದಲ ಸೃಷ್ಟಿಸಿತ್ತು. ಅದಾನಿ ಹಗರಣದಲ್ಲಿ ಮೋದಿಗೆ ಲಿಂಕ್ ಇದೆ. ಹೀಗಾಗಿ ಜೆಪಿಸಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.ಕಾಂಗ್ರೆಸ್ ಪ್ರತಿಭಟನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಕಳೆದ 9 ವರ್ಷದಲ್ಲಿ ಸಂಸದೀಯ ಸಂಪ್ರದಾಯಗಳನ್ನು ಅವಮಾನಿಸಿಕೊಂಡು ಬರುತ್ತಿದೆ. ಸಂಸತ್ತು ನಡೆಯುವುದು ಜನಪರ ಕಾನೂನು ತರುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ.ಪ್ರಧಾನಿ ಮೋದಿ ಸರ್ಕಾರದಲ್ಲಿ ಸಂಸತ್ತಿನ ಐತಿಹಾಸಿಕ ಹಾಗೂ ಸದ್ಬಳಕೆ ಉತ್ಪಾದನೆ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜೋಶಿ ಹೇಳಿದ್ದಾರೆ.