ಅಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಗುರುದ್ವಾರ ಕರ್ತೆ ಪರ್ವಾನ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ. ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಅವರು, ಗುರುದ್ವಾರ ಕರ್ತೆ ಪರ್ವಾನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿ ಅಫ್ಘಾನಿಸ್ತಾನದಲ್ಲಿರುವ ಸಿಖ್ಖರಿಗೆ ಜಾಗತಿಕ ಬೆಂಬಲಕ್ಕಾಗಿ ಮನವಿ ಮಾಡಿದ್ದಾರೆ. ಇಂದು ಗುರುದ್ವಾರಕ್ಕೆ ಅಪರಿಚಿತ ಶಸ್ತ್ರಧಾರಿ ದಾಳಿಕೋರನೊಬ್ಬ ಪ್ರವೇಶಿಸಿದ್ದಾನೆ ಎಂದು ಇಂಡಿಯನ್ ವರ್ಲ್ಡ್ ಫೋರಂ ಮುಖ್ಯಸ್ಥ ಪುನೀತ್ ಸಿಂಗ್ ಚಾಂಧೋಕ್ ಹೇಳಿದ್ದಾರೆ. ಪುನೀತ್ ಪ್ರಕಾರ ದಾಳಿಕೋರ ಉಗ್ರರು ಐಸಿಸ್ ಸೇರಿದ್ದಾರೆ. ಯಾವುದೇ ವಿಳಂಬ ಮಾಡದೆ ತಕ್ಷಣವೇ ಆಫ್ಘನ್ ಅಲ್ಪಸಂಖ್ಯಾತರನ್ನು ಅಲ್ಲಿಂದ ವಾಪಸ್ ಕಳುಹಿಸುವಂತೆ ಪುನೀತ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆರು ತಿಂಗಳಿಂದ ಇ-ವೀಸಾಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.