ಗುರುವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದ ಅಮಿತ್ ಶಾ, ಮಂಡ್ಯ ಕ್ಕೆ ತೆರಳುವ ಮುನ್ನ ಓಲ್ಡ್ ಮೈಸೂರು ಬಗ್ಗೆ ಡೀಟೇಲ್ ರಿಪೋರ್ಟ್ ಕೊಡಿ ಎಂದು ಕೇಳಿದ್ದರು. ಖಾಸಗಿ ಹೋಟೆಲ್‍ನಿಂದ ಮಂಡ್ಯಕ್ಕೆ ಹೊರಡುವ ಮುನ್ನ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳಿ ಓಲ್ಡ್ ಮೈಸೂರು ಜಾತಿ ಸಮೀಕರಣದ ಫಸ್ಟ್ ರಿಪೋರ್ಟ್ ಪಡೆದಿದ್ದಾರೆ. ಎಸ್‍ಎಂ ಕೃಷ್ಣ, ದೇವೇಗೌಡರು, ಜೆಡಿಎಸ್ ಪ್ರಭಾವದ ಬಗ್ಗೆ ಹಾಗೂ ಸಿದ್ದರಾಮಯ್ಯ, ಡಿಕೆಶಿ ಬಗ್ಗೆ, ಓಲ್ಡ್ ಮೈಸೂರು ಭಾಗದಲ್ಲಿ ಹಲವು ನಾಯಕರ ಪ್ಲಸ್, ಮೈನಸ್ ಮಾಹಿತಿ ಕೇಳಿದ್ದಾರೆ. ಜಾತಿ ರಾಜಕಾರಣ, ಹಿಂದುತ್ವ ಅಜೆಂಡಾ ರೇಟಿಂಗ್ ಬಗ್ಗೆಯೂ ಶಾ ಮಾಹಿತಿ ಪಡೆದುಕೊಂಡಿದ್ದಾರೆ.