ಕೆಲವು ದಿನಗಳ ಹಿಂದೆ ಶ್ರೀಲಂಕಾದಾದ್ಯಂತ ಭಾರೀ ಪ್ರತಿಭಟನೆ ನಡೆದ ಹಿನ್ನೆಲೆ ಶ್ರೀಲಂಕಾ ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರ ಪತ್ನಿ ಹಾಗೂ ಮಗನೊಂದಿಗೆ ಅಮೆರಿಕ ತೆರಳಿ ಅಲ್ಲಿಯೇ ನೆಲೆಸಲು ತಮ್ಮ ವಕೀಲರ ಮೂಲಕ ಗ್ರೀನ್ ಕಾರ್ಡ್ ಪಡೆಯಲು ಕಳೆದ ತಿಂಗಳೇ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ. ಗೊತಬಯ ರಾಜಪಕ್ಸೆ ಪ್ರಸ್ತುತ ಬ್ಯಾಂಕಾಕ್ನ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ತಮ್ಮ ಪತ್ನಿಯೊಂದಿಗೆ ಆಗಸ್ಟ್ 25ರಂದು ಶ್ರೀಲಂಕಾಗೆ ಮರಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ