ಅಮೆರಿಕದಲ್ಲಿ ಶಸ್ತ್ರಾಸ್ತ್ರ ಖರೀದಿಗೆ ನಿಯಂತ್ರಣವೇ ಇಲ್ಲದಂತಾಗಿದ್ದು, ಬಂದೂಕು ಎಲ್ಲರ ಕೈಗೂ ದೊರಕುವಂತಾಗಿದೆ. ಈ ಹಿನ್ನೆಲೆ ಆಗಾಗ್ಗೆ ಗುಂಡಿನ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಮಂಗಳವಾರ ರಾತ್ರಿ ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣ ನಡೆದಿದ್ದು, ಸುಮಾರು 10 ಜನರು ಬಲಿಯಾಗಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ವರ್ಜೀನಿಯಾದ, ವಾಲ್‌ಮಾರ್ಟ್‌ಸ್ಟೋರ್‌ವೊಂದರಲ್ಲಿ ಓರ್ವ ಬಂದೂಕುಧಾರಿ ಮನ ಬಂದಂತೆ ಗುಂಡು ಹಾರಿಸಿ ಹಲವರನ್ನು ಬಲಿ ಪಡೆದಿದ್ದಾನೆ ಎಂದು ವರ್ಜೀನಿಯಾ ಪೊಲೀಸರು ಮಾಹಿತಿ ನೀಡಿದ್ದಾರೆ.