ಅಮೆರಿಕದಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿದ್ದ ಓಮಿಕ್ರಾನ್ ಉಪತಳಿ BQ.1 ಭಾರತದಲ್ಲಿ ಮೊದಲ ಬಾರಿಗೆ ಪತ್ತೆ

ಕೊರೊನಾ ವೈರಸ್‌ಭೀತಿಯಿಂದ ಹೊರ ಬಂದಿರುವ ಜನರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧವಾಗುತ್ತಿದ್ದಾರೆ. ಆದರೆ ಈ ನಡುವೆ ಅಮೆರಿಕದಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿದ್ದ ಓಮಿಕ್ರಾನ್ ಉಪತಳಿ ‘BQ.1’ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಪುಣೆ ಮೂಲದ ವ್ಯಕ್ತಿಯೊಬ್ಬರ ಕೊರೊನಾ ಸ್ಯಾಂಪಲ್‌ನ ಜೀನೋಮ್ ಪರೀಕ್ಷೆ ವೇಳೆ ಈ ಹೊಸ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ. ಪುಣೆಯಲ್ಲಿ 23 ಹೊಸ ಪ್ರಕರಣಗಳು ವರದಿಯಾಗಿವೆ. ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಪ್ರಕರಣಗಳು ಹೆಚ್ಚಾಗಬಹುದು ಎಂದು ಅಧಿಕಾರಿ ಪ್ರದೀಪ್ ಅವಟೆ ಆತಂಕ ವ್ಯಕ್ತಪಡಿಸಿದ್ದಾರೆ. ಜ್ವರ ತರಹದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಆದಷ್ಟು ಬೇಗ ವೈದ್ಯಕೀಯ ಸಲಹೆ ಪಡೆಯಿರಿ, ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *