ಚೀನಾ ಹಾಗೂ ಅಮೆರಿಕ ನಡುವಿನ ಉದ್ವಿಗ್ನ ವಾತಾವರಣ ಇನ್ನಷ್ಟು ಹೆಚ್ಚಾಗಿದೆ. ಅದಕ್ಕೆ ಕಾರಣವಾಗಿರುವುದು ಚೀನಾದ ಗುಪ್ತಚರ ಬಲೂನ್ಗಳು ಅಮೆರಿಕ, ಕೆನಡ ಮತ್ತು ಲ್ಯಾಟಿನ್ಅಮೆರಿಕ ಭಾಗದಲ್ಲಿ ಕಾಣಿಸಿಕೊಂಡಿರುವುದು. ಪೆಂಟಗನ್ನೇರವಾಗಿ ಚೀನಾ ವಿರುದ್ಧ ದಾಳಿಗೆ ಇಳಿದಿತ್ತು. ಲ್ಯಾಟಿನ್ಅಮೆರಿಕ ಪ್ರದೇಶದಲ್ಲಿ ಚೀನಾದ ಇನ್ನೊಂದು ಬಲೂನ್ಕೂಡ ಹಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ನಡುವೆ ಅಮೆರಿಕದ ರಕ್ಷಣಾ ಸಚಿವ ಅಂಟೋನ ಬ್ಲಿಂಕೆನ್, ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಅಮೆರಿಕದ ರಕ್ಷಣಾ ಸಚಿವರ ಜೊತೆ ಚೀನಾದ ರಕ್ಷಣಾ ಸಚಿವ ಯಾಂಗ್ಯಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಲ್ಯಾಟಿನ್ ಅಮೆರಿಕದ ಮೂಲಕ ಬಲೂನ್ ಹಾದುಹೋಗಿದೆ ಎಂದು ಯುಎಸ್ ರಕ್ಷಣಾ ಸಚಿವಾಲಯದ ಪೆಂಟಗನ್ ವಕ್ತಾರ ಪ್ಯಾಟ್ರಿಕ್ ರೈಡರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಮೌಲ್ಯಮಾಪನದ ಪ್ರಕಾರ, ಇದು ಚೀನಾದ ಕಣ್ಗಾವಲು ಅಡಿಯಲ್ಲಿ ಹಾದುಹೋಗಿರುವ ಎರಡನೇ ಬಲೂನ್ ಆಗಿದೆ ಎಂದಿದ್ದಾರೆ.