ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನ: ದೊಡ್ಡಣ್ಣನಿಗೆ ಸರಣಿ ಶಾಕ್

ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ ಪತನಗೊಂಡ ಬೆನ್ನಲ್ಲೇ ಇದೀಗ ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡಾ ಪತನಗೊಂಡು ಅಮೆರಿಕಾದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಭಾರೀ ಪ್ರಮಾಣದ ಹೊಡೆತವನ್ನು ನೀಡಿದೆ. ರಿಪಬ್ಲಿಕ್ ಬ್ಯಾಂಕ್ ದಿವಳಿ ಅಂಚಿಗೆ ಸಿಲುಕಿದ ಹಿನ್ನೆಲೆ ಕ್ಯಾಲಿಫೋರ್ನಿಯಾದ ಹಣಕಾಸು ಸಂರಕ್ಷಣೆ ಹಾಗೂ ನಾವೀನ್ಯತೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಸಂಕಷ್ಟಕ್ಕೆ ಸಿಲುಕಿದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಅನ್ನು ಜೆಪಿ ಮೊರ್ಗಾನ್ ಚೇಸ್ ಅಂಡ್ ಕಂಪನಿಗೆ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಆಸ್ತಿ ಮತ್ತು ಠೇವಣಿಗಳ ಬಗ್ಗೆ ಜೆಪಿ ಮೊರ್ಗಾನ್ ಕಂಪನಿ ನೋಡಿಕೊಳ್ಳುವುದರಿಂದ ಹೂಡಿಕೆದಾರರು ಭಯಪಡುವ ಅಗತ್ಯವಿಲ್ಲ. ಏಪ್ರಿಲ್ 13ಕ್ಕೆ ಅನುಗುಣವಾಗಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್ 18 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ 8.4 ಲಕ್ಷ ಕೋಟಿ ರೂ. ಠೇವಣಿ ಹೊಂದಿತ್ತು. ಆದರೆ ಸಿಲಿಕಾನ್ ವ್ಯಾಲಿ ಹಾಗೂ ಸಿಗ್ನೇಚರ್ ಬ್ಯಾಂಕ್‌ಗಳು ಪತನಗೊಂಡ ಬಳಿಕ ಜನರು ಆತಂಕಗೊಂಡು ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನಿಂದ ತಮ್ಮ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳಲು ಪ್ರಾರಂಭಿಸಿದರು. ಕೇವಲ ಒಂದು ತಿಂಗಳಲ್ಲಿ ಜನರು 8.1 ಲಕ್ಷ ಕೋಟಿ ಹಣವನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ರಿಪಬ್ಲಿಕ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಯಿತು. 1985ರಲ್ಲಿ ಪ್ರಾಂಭವಾದ ರಿಪಬ್ಲಿಕ್ ಬ್ಯಾಂಕ್ ಶ್ರೀಮಂತರನ್ನು ಗುರಿಯಾಗಿರಿಸಿಕೊಂಡು ಉತ್ತಮ ಸೇವೆಗಳನ್ನು ಒದಗಿಸುತ್ತಿತ್ತು. 2000 ಇಸವಿಯ ವೇಳೆಗೆ ಅಮೆರಿಕದ 14ನೇ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2022ರ ವರ್ಷಾಂತ್ಯದಲ್ಲಿ ಅಮೆರಿಕದ 7 ರಾಜ್ಯಗಳಲ್ಲಿ 80 ಶಾಖೆ ಹಾಗೂ 7,000 ಸಿಬ್ಬಂದಿಯನ್ನು ಹೊಂದಿತ್ತು

Leave a Reply

Your email address will not be published. Required fields are marked *