ಭಾರತದಿಂದ ಪರಾರಿಯಾಗಿ ಕೈಲಾಸ ದೇಶ ಸೃಷ್ಟಿಸಿ ಜಗತ್ತಿಗೆ ಅಚ್ಚರಿ ನೀಡಿದ ನಿತ್ಯಾನಂದ, ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಭಾಷಣ ಮಾಡುವ ಮೂಲಕ ಮತ್ತೊಂದು ಸರ್ಪ್ರೈಸ್ ನೀಡಲಾಗಿತ್ತು. ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಪಾಲ್ಗೊಳ್ಳುವ ಮೂಲಕ ವಿಶ್ವಾದ್ಯಂತ ನಿತ್ಯಾನಂದ ಮತ್ತೆ ಸದ್ದು ಮಾಡಿದ್ದರು. ಇದೀಗ ಕೈಲಾಸದಲ್ಲಿ ಕುಳಿತ ನಿತ್ಯಾನಂದನಿಗೆ ತಲೆನೋವು ಶುರುವಾಗಿದೆ. ಇತ್ತೀಚೆಗೆ ಅಮೆರಿಕಾದ ನೆವಾರ್ಕ್ ಮೇಯರ್ ಹಿಂದೂ ದೇಶ ಕೈಲಾಸದ ಪ್ರತಿನಿಧಿಗಳ ಜೊತೆ ಮಹತ್ವದ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ನೆವಾರ್ಕ್ ಮೇಯರ್ ಇದೀಗ ಗರಂ ಆಗಿದ್ದಾರೆ. ಕಾರಣ ಕೈಲಾಸ ದೇಶ ಅನ್ನೋದೇ ಇಲ್ಲ. ನಕಲಿ ದೇಶ ಸೃಷ್ಟಿಸಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೇಯರ್ ರಾಸ್ ಬರಾಕ ಹೇಳಿದ್ದಾರೆ. 2023ರ ಜನವರಿ ತಿಂಗಳಲ್ಲಿ ಕೈಲಾಸ ದೇಶದ ಪ್ರತಿನಿಧಿಗಳಿಗೆ ನವಾರ್ಕ್ ಸಿಟಿ ಮೇಯರ್ ಆಹ್ವಾನ ನೀಡಿದ್ದರು. ಇದರಂತೆ ನೆವಾರ್ಕ್ ಹಾಗೂ ಕೈಲಾಸ ದೇಶ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಇಷ್ಟೇ ಅಲ್ಲ ಅಮೆರಿಕದ ಜೊತೆ ಕೈಲಾಸ ದೇಶದ ದ್ವಿಪಕ್ಷೀಯ ಒಪ್ಪಂದ ಎಂದು ಹೇಳಲಾಗಿತ್ತು. ಇದೀಗ ನೆವಾರ್ಕ್ ಸಿಟಿ ಕೌನ್ಸಿಲ್, ಕೆಲಾಸ ದೇಶವೇ ಇಲ್ಲ ಎಂದಿದೆ. ಸಾಮಾಜಿಕ ಜಾಲತಾಣ, ವೆಬ್‌ಸೈಟ್ ಮೂಲಕ ಕೈಲಾಸ ದೇಶ ಸೃಷ್ಟಿಸಲಾಗಿದೆ. ಅಸಲಿಗೆ ದೇಶವೇ ಇಲ್ಲ ಎಂದು ಸಿಟಿ ಕೌನ್ಸಿಲಿ ಹೇಳಿದೆ.ಕೈಲಾಸ ದೇಶದ ಜೊತೆ ಒಪ್ಪಂದ ಮಾಡಿಕೊಂಡು ನೆವಾರ್ಕ್ ಸಿಟಿ ಕೌನ್ಸಿಲಿ ವಂಚನೆಗೆ ಒಳಗಾಗಿದೆ. ಗೂಗಲ್‌ಗೂ ಕೈಲಾಸ ದೇಶ ಹುಡುಕಲು ಸಾಧ್ಯವಾಗಿಲ್ಲ ಎಂದು ವಂಗ್ಯವಾಡಿದೆ.