ಕ್ರಿಸ್ಮಸ್ ಆಚರಣೆಯಲ್ಲಿದ್ದ ಅಮೆರಿಕಾದ ಜನರನ್ನು ಚಂಡಮಾರುತ ಮತ್ತು ಹಿಮಪಾತ, ಭೀಕರ ಗಾಳಿ ಜನರನ್ನು ಮನೆಯಿಂದ ಹೊರ ಬರದಂತೆ ಮಾಡಿವೆ.ಜನರು ವರ್ಷದ ಕೊನೆಯ ದಿನಗಳನ್ನು ಇಂತಹ ಚಳಿಯಲ್ಲಿ ಕೊನೆಗೊಳಿಸುತ್ತಿದ್ದಾರೆ. ಅಮೆರಿಕಾದಲ್ಲಿ ಕ್ರೂರ ಚಳಿಗಾಲದ ಚಂಡಮಾರುತಕ್ಕೆ 31 ಮಂದಿ ಸಾವನಪ್ಪಿದ್ದಾರೆ. ಇತ್ತ, ಪೂರ್ವ ರಾಜ್ಯಗಳಾದ್ಯಂತ 2, 00,000 ಕ್ಕೂ ಹೆಚ್ಚು ಜನರು ಕ್ರಿಸ್ಮಸ್ ವೇಳೆಯಲ್ಲಿಯೇ ಮನೆಗಳಲ್ಲಿ ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ತೀವ್ರ ಚಳಿ ಅಮೆರಿಕಾದ ಅನೇಕ ಭಾಗಗಳಲ್ಲಿ ಮತ್ತು ಕೆನಡಾದಲ್ಲಿ ವಿನಾಶವನ್ನು ಉಂಟುಮಾಡಿದೆ. ನ್ಯೂಯಾರ್ಕ್ ರಾಜ್ಯದಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.