ಅಮೆರಿಕಾದ ನ್ಯೂಯಾರ್ಕ್‌ನ ಟೈಮ್ಸ್‌ಸ್ಕ್ವೇರ್‌ನಲ್ಲೂ ಕಂಗೊಳಿಸಿದ ರಾಮ್‌ಲಲ್ಲಾ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣವಾಗಿದೆ. ದೇಶಾದ್ಯಂತ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ಶತಮಾನಗಳ ಕಾಲ ನಡೆಸಿದ್ದ ಹೋರಾಟದ ಫಲವಾಗಿ ಕೊನೆಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾನ ದರ್ಶನ ಪಡೆದು ಭಕ್ತಾಧಿಗಳು ಧನ್ಯರಾಗುತ್ತಿದ್ದಾರೆ.ವಿದೇಶದಲ್ಲಿರುವ ಭಾರತೀಯರು ಸಹ ಭಾರತದ ಈ ಐತಿಹಾಸಿಕ ದಿನವನ್ನು ಸಂಭ್ರಮದಿಂದ ಕಣ್ತುಂಬಿಕೊಂಡಿದ್ದಾರೆ. ಟಿವಿ, ಲೈವ್‌ನಲ್ಲಿ ಕಾರ್ಯಕ್ರಮದ ಪ್ರಸಾರವನ್ನು ವೀಕ್ಷಿಸಿದ್ದಾರೆ.ಮಾತ್ರವಲ್ಲ, ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸಲು ಇಲ್ಲಿ ವಾಸವಿರೋ ಭಾರತೀಯರು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಜಮಾಯಿಸಿದರು, ಐಕಾನಿಕ್ ಸ್ಥಳವನ್ನು ರೋಮಾಂಚಕ ಬಣ್ಣಗಳಿಂದ ಬೆಳಗಿಸಿದರು. ರಾಮನ ಫೋಟೋವನ್ನು ಕಂಡು ಸಂಭ್ರಮಿಸಿದರು.

Leave a Reply

Your email address will not be published. Required fields are marked *