ಅಮೆರಿಕಾ ಅಧ್ಯಕ್ಷರ ಬಳಿ ಯಾವಾಗಲೂ ಇರುತ್ತದೆ ಫುಟ್‌ಬಾಲ್ ಇದು ಸಾಮಾನ್ಯ ಫುಟ್‌ಬಾಲ್‌ಅಲ್ಲ ಪ್ರಪಂಚದ ಅತ್ಯಂತ ಶಕ್ತಿಶಾಲಿ ಫುಟ್‌ಬಾಲ್. ಇದರಿಂದ ಇಡೀ ಜಗತ್ತನ್ನೇ ಧ್ವಂಸ ಮಾಡಬಹುದು. ಏನಿದು, ಜಗತ್ತನ್ನೇ ಧ್ವಂಸ ಮಾಡಬಲ್ಲ ಫುಟ್‌ಬಾಲ್. ತಮಾಷೆ ಮಾಡುತ್ತಿದ್ದೇವೆ ಅಂದುಕೊಳ್ಳಬೇಡಿ. ಫುಟ್‌ಬಾಲ್‌ಎಂದರೆ ಅದು ನ್ಯೂಕ್ಲಿಯಾರ್‌ನ್ಯೂಕ್‌ಗೆ ಇರುವ ಕೋಡ್‌ನೇಮ್. ಅಮೆರಿಕಾ ಅಧ್ಯಕ್ಷರು ಯಾವುದಾದೂ ದೇಶ ಅಥವಾ ದೇಶಗಳ ಮೇಲೆ ಅಣ್ವಸ್ತ್ರ ದಾಳಿಗೆ ನಿರ್ಧಾರ ಮಾಡಿದರೆ ಅವರು ಎಲ್ಲಿ ಕುಳಿತಿರುತ್ತಾರೋ ಅಲ್ಲಿಂದಲೇ ದಾಳಿಗೆ ಆಜ್ಞೆ ಮಾಡಬಹುದು. ಅದಕ್ಕಾಗಿಯೇಈ ಫುಟ್‌ಬಾಲ್‌ಎಂಬ ಸ್ಯೂಟ್‌ಕೇಸನ್ನು ಅಮೆರಿಕಾ ಅಧ್ಯಕ್ಷರು ಯಾವಾಗಲೂ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಜತೆಗೆ ಅದನ್ನು ಅಧ್ಯಕ್ಷರಾದವರು ಜೊತೆಗೇ ಇಟ್ಟುಕೊಂಡಿರಬೇಕು ಎಂಬುದು ಕಡ್ಡಾಯ. ಅಧ್ಯಕ್ಷರ ಜೊತೆ ಯಾವಾಗಲೂ ಸೇನೆಯ ಸಿಬ್ಬಂದಿಯೊಬ್ಬರು ಇದನ್ನು ಹಿಡಿದು ನಡೆಯುತ್ತಾರೆ. ಇತ್ತೀಚೆಗೆ ವ್ಲಾಡಿಮಿರ್‌ಪುಟಿನ್‌ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ ನಂತರ ಈ ಫುಟ್‌ಬಾಲ್‌ನ ಪ್ರಾಮುಖ್ಯತೆ ಹೆಚ್ಚಾಗಿದೆ. ಒಂದು ವೇಳೆ ರಷ್ಯಾ ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾದರೆ, ಅರೆ ಕ್ಷಣದಲ್ಲಿ ಅಮೆರಿಕಾ ಅದ್ಯಕ್ಷ ಜೋ ಬೈಡನ್‌ಅಣ್ವಸ್ತ್ರ ಪ್ರಯೋಗವನ್ನು ಜಗತ್ತಿನ ಯಾವ ಮೂಲೆಯಿಂದ ಬೇಕಾದರೂ ಮಾಡಬಹುದು.