ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ಅವರಿಗೆ 80 ತುಂಬಿದ ಹಿನ್ನೆಲೆಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರಿಗೆ ನೀಡಿದ ‘ದಶ ದಾನ’ ಪೆಟ್ಟಿಗೆ

ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಸ್ತುತ ತಮ್ಮ ಜೀವನದ 80 ವಸಂತಗಳನ್ನು ಪೂರೈಸಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ 80 ವಸಂತಗಳನ್ನು ಕಂಡ ವ್ಯಕ್ತಿಗೆ ವಿಶೇಷವಾದ ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತದೆ. ಅದರಂತೆ ಅವರಿಗೆ ದಶದಾನಗಳನ್ನು ನೀಡಲಾಗುತ್ತದೆ. ಅದನ್ನೇ ಈಗ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷರಿಗೆ ಮಾಡಿದ್ದಾರೆ. ಪ್ರಾಚೀನ ಭಾರತೀಯ ಗ್ರಂಥವಾದ ಕೃಷ್ಣ ಯಜುರ್ವೇದದ ವೈಖಾನಸ್ ಗೃಹ್ಯ ಸೂತ್ರದ ಪ್ರಕಾರ ಒಬ್ಬ ವ್ಯಕ್ತಿಯು ‘ದೃಷ್ಟ ಸಹಸ್ರಚಂದ್ರೋ’ ಅಥವಾ ಎಂಬತ್ತು ವರ್ಷ ಮತ್ತು ಎಂಟು ತಿಂಗಳ ವಯಸ್ಸನ್ನು ಪೂರ್ಣಗೊಳಿಸಿದಾಗ ಒಂದು ಸಾವಿರ ಹುಣ್ಣಿಮೆಗಳನ್ನು ನೋಡಿದವನಾಗುತ್ತಾನೆ ಎಂದು ಉಲ್ಲೇಖವಿದೆ. ಅದರಂತೆ ವ್ಯಕ್ತಿಯೊಬ್ಬ ಒಂದು ಸಾವಿರ ಹುಣ್ಣಿಮೆಗಳು ಅಥವಾ ‘ಸಹಸ್ರ ಪೂರ್ಣ ಚಂದ್ರೋದಯ’ ವನ್ನು ತಲುಪಿದರೆ ಹಿಂದೂ ಜೀವನ ಪದ್ಧತಿ ಪ್ರಕಾರ ಅದು ಆತನ ಜೀವನದ ಪ್ರಮುಖ ಮೈಲಿಗಲ್ಲು. ಎರಡು ಹುಣ್ಣಿಮೆಗಳ ನಡುವಿನ ಅಂತರವು ಸುಮಾರು 29.53 ದಿನಗಳು, ಆದ್ದರಿಂದ ಒಂದು ಸಾವಿರ ಹುಣ್ಣಿಮೆಗಳ ಪೂರ್ಣ ಅವಧಿಯ ತಲುಪಲು ಸರಿಸುಮಾರು 29530 ದಿನಗಳು ಅಥವಾ 80 ವರ್ಷ 8 ತಿಂಗಳುಗಳು ಬೇಕಾಗುತ್ತವೆ. ಜೀವನದ ಈ ಹಂತದಲ್ಲಿ, ವ್ಯಕ್ತಿಯನ್ನು ಜೀವನದ ಸಂಪೂರ್ಣ ಅನುಭವಕ್ಕಾಗಿ ಗೌರವಿಸಲಾಗುತ್ತದೆ ಮತ್ತು ಅದನ್ನು ಸಂಭ್ರಮಿಸಲಾಗುತ್ತದೆ.ಈಗ ಬೈಡೆನ್‌ಅವರಿಗೆ 80 ತುಂಬಿದ ಹಿನ್ನೆಲೆಯಲ್ಲಿ ಅದನ್ನು ಸಂಕೇತಿಸುವ ಸಲುವಾಗಿ ಪ್ರಧಾನಿ ಮೋದಿ ಈ ದಶದಾನದ ಸೂಕವಾಗಿ ಉಡುಗೊರೆ ನೀಡಿದ್ದಾರೆ. ಈ ಉಡುಗೊರೆ ಶ್ರೀಗಂಧದ ಪೆಟ್ಟಿಗೆಯನ್ನು ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ತಮ್ಮ ಕುಶಲತೆಯಿಂದ ತಯಾರಿಸಿದ್ದಾರೆ. ಕರ್ನಾಟಕದ ಮೈಸೂರಿನಿಂದ ಬಂದ ಶ್ರೀಗಂಧದ ಮರದ ಮೇಲೆ ಸಂಕೀರ್ಣವಾಗಿ ಕೆತ್ತನೆಗಳನ್ನು ಸಸ್ಯ, ಪ್ರಾಣಿಗಳ ಕೆತ್ತೆನೆಗಳನ್ನು ಮಾಡಲಾಗಿದೆ.

Leave a Reply

Your email address will not be published. Required fields are marked *