ದೇಶದ ಮೇಲೆ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ ಆಗಬಹುದು. ಹಾಗಾಗಿ ಯಾವುದೇ ಕ್ಷಣದಲ್ಲಿ ದೇಶ ಪರಮಾಣು ದಾಳಿಗೆ ಸಿದ್ಧವಾಗಿರಬೇಕು ಎಂದು ಉತ್ತರ ಕೊರಿಯಾದ ನಾಯಕ ಕಿಮ್ಜಾಂಗ್ಉನ್ಹೇಳಿಕೆ ನೀಡಿದ್ದಾರೆ. ಅಮೆರಿಕದ ನ್ಯೂಕ್ಲಿಯರ್ಸಂಪತ್ತಿನೊಂದಿಗೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ದೇಶಗಳು ಜಂಟಿ ಮಿಲಿಟರಿ ವ್ಯಾಯಾಮವನ್ನು ದಿನದಿಂದ ದಿನಕ್ಕೆ ವಿಸ್ತರಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುದ್ಧ ಸನ್ನದ್ಧವಾಗಿರುವಂತೆ ಕಿಮ್ಜಾಂಗ್ತನ್ನ ಸೇನೆಗೆ ಸೂಚಿಸಿದ್ದಾನೆ ಎಂದು ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ಕೆಸಿಎನ್ಎ ತಿಳಿಸಿದೆ. ಶನಿವಾರ ಹಾಗೂ ಭಾನವಾರ ಮಿತ್ರ ರಾಷ್ಟ್ರಗಳು ಇದೇ ಅಭ್ಯಾಸ ಮಾಡಿದ್ದವು ಎಂದು ಕೆಸಿಎನ್ಎ ವರದಿ ಮಾಡಿದೆ. ವ್ಯಾಯಾಮದಲ್ಲಿ, ಯುದ್ಧತಂತ್ರದ ಪರಮಾಣು ದಾಳಿಯ ಸನ್ನಿವೇಶದಲ್ಲಿ 800 ಮೀ ಎತ್ತರದಲ್ಲಿ ಗುರಿಯನ್ನು ಹೊಡೆಯುವ ಮೊದಲು ಅಣಕು ನ್ಯೂಕ್ಲಿಯರ್ ಸಿಡಿತಲೆ ಹೊಂದಿದ ಬ್ಯಾಲಿಸ್ಟಿಕ್ ಕ್ಷಿಪಣಿ 800 ಕಿ.ಮೀ ವೇಗದಲ್ಲಿ ಹಾರಿಹೋಗಿದೆ ಎಂದು ಕೆಸಿಎನ್ಎ ವರದಿ ಮಾಡಿದೆ.