ಅಯೋಧ್ಯೆಯ ರಾಮಮಂದಿರಕ್ಕಾಗಿ ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮದ ಕಲ್ಲುಗಳು “60 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಸಾಲಿಗ್ರಾಮ ಶಿಲೆಗಳು ಎರಡು ವಿಭಿನ್ನ ಟ್ರಕ್‌ಗಳಲ್ಲಿ ನೇಪಾಳದಿಂದ ಅಯೋಧ್ಯೆಗೆ ತಲುಪಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾಲಿಗ್ರಾಮ ಕಲ್ಲುಗಳನ್ನು ಹಸ್ತಾಂತರಿಸುವ ಮೊದಲು ಈ ಕಲ್ಲುಗಳಿಗೆ ಅರ್ಚಕರು ಮತ್ತು ಸ್ಥಳೀಯರು ಹೂಮಾಲೆಯಿಂದ ಅಲಂಕರಿಸಿ ಧಾರ್ಮಿಕ ವಿಧಿಗಳನ್ನು ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ಕಲ್ಲಿನಿಂದ ಕೆತ್ತಿದ ಮಗುವಿನ ರೂಪದಲ್ಲಿರುವ ಶ್ರೀರಾಮನ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವುದು. ಒಂದು ಬಂಡೆ 26 ಟನ್ ಮತ್ತು ಇನ್ನೊಂದು 14 ಟನ್ ತೂಕವಿದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ