ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಚೀನಾಗೆ ಭಾರತ ತಿರುಗೇಟು ನೀಡಿದೆ. ಭಾರತದ ನಾಯಕರು ಭಾರತದ ಇತರ ರಾಜ್ಯಗಳಿಗೆ ಆಗಾಗ ಹೋಗುತ್ತಿರುವಂತೆ ಅರುಣಾಚಲಕ್ಕೂ ಹೋಗುತ್ತಿರುತ್ತಾರೆ ಅರುಣಾಚಲ ಪ್ರದೇಶವೂ ಹಿಂದೆ ಇಂದು ಮುಂದೆ ಹಾಗೂ ಎಂದೆಂದೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಭಾರತ ಹೇಳಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ವೆನ್‌ಬಿನ್ ಝಾಂಗ್ನಾನ್ (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟಿರುವ ಹೆಸರು) ಚೀನಾದ ಅವಿಭಾಜ್ಯ ಅಂಗ ಎಂದು ಹೇಳಿದ್ದರು.