ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರು ಕಾರಿನಿಂದ ಇಳಿದಾಗ ಅವರನ್ನು ಮಾತನಾಡಿಸಲು ಅನೇಕರು ಮುಂದಾಗುತ್ತಾರೆ. ಜನಸಂದಣಿ ನಡುವೆ ಇದ್ದ ವ್ಯಕ್ತಿಯೊಬ್ಬ ಕ್ರಿಸ್ಟಿನಾ ಅವರ ಹತ್ತಿರಕ್ಕೆ ಬಂದು, ಅವರ ತಲೆಗೆ ಗನ್ಗುರಿಯಿಟ್ಟು ಟ್ರಿಗರ್ಒತ್ತುತ್ತಾನೆ. ಈ ವೇಳೆ ಗುಂಡು ಹಾರಿಲ್ಲ. ತಕ್ಷಣ ಎಚ್ಚೆತ್ತ ರಕ್ಷಣಾ ಸಿಬ್ಬಂದಿ, ಆ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಾರೆ. ಅದೃಷ್ಟವಶಾತ್ಕ್ರಿಸ್ಟಿನಾ ಅವರು ಅಪಾಯದಿಂದ ಪಾರಾಗಿದ್ದಾರೆ. ತಕ್ಷಣ ಆತನನ್ನು ಬಂಧಿಸಿ ಗನ್ವಶಕ್ಕೆ ಪಡೆದಿದ್ದಾರೆ.