ಮಾರ್ಚ್‍ನಲ್ಲಿ ಓಲಾ, ಉಬರ್ ಲೈಸೆನ್ಸ್ ಅವಧಿ ಮುಗಿದಿದೆ ಅವಧಿ ಮುಗಿದ್ರು ಓಲಾ, ಉಬರ್ ಆ್ಯಪ್ ಮುಂದುವರಿದಿವೆ ಅವಧಿ ಮುಗಿದ್ರೂ, ಜನರಿಗೆ ತೊಂದರೆ ಆಗಬಾರದು ಅಂತ ಮಾನವೀಯತೆ ದೃಷ್ಟಿಯಿಂದ ಸುಮ್ಮನಿದ್ದೆ. ಸಾರಿಗೆ ಅಧಿಕಾರಿಗಳ ನೋಟಿಸ್‍ಗೆ ಕ್ಯಾರೆ ಎನ್ನದೇ ಹೋದ್ರೆ ಕಾನೂನು ಬಾಹಿರ ಕೆಲಸ ಮಾಡಿದ್ರೆ ಸಹಿಸುವುದಿಲ್ಲ. ಯಾರೇ ಆದ್ರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅವಕಾಶ ಸಿಕ್ಕರೆ ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ ಮಾಡಿಕೊಡುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.