ಅಸ್ಸಾಂ, ಲಡಾಖ್‍ನಲ್ಲಿ ಭೂಕಂಪ ಸಂಭವಿಸಿದೆ.- ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲು

ಅಸ್ಸಾಂನಲ್ಲಿ ಬೆಳಗ್ಗೆ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 3.7 ರಷ್ಟಿದ್ದು, ಬೆಳಿಗ್ಗೆ 10:05 ಕ್ಕೆ ಭೂಮಿ ಕಂಪಿಸಿದೆ. ತೇಜ್‍ಪುರ್‌ದಿಂದ ಸುಮಾರು 39 ಕಿ.ಮೀ ದೂರದಲ್ಲಿ ಭೂಕಂಪ ಉಂಟಾಗಿದೆ.ಕೇಂದ್ರಾಡಳಿತ ಪ್ರದೇಶವಾದ ಲಡಾಖ್‍ನಲ್ಲಿ ಸಹ 3.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಳಗ್ಗೆ 10:23ಕ್ಕೆ ಭೂಕಂಪದ ಅನುಭವವಾಗಿದೆ. ಭೂಮಿಯ 10 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ. ಅಲ್ಲದೇ 24 ಗಂಟೆಗಳಲ್ಲಿ ಅಸ್ಸಾಂನಲ್ಲಿ ಸಂಭವಿಸಿದ 2ನೇ ಭೂಕಂಪ ಇದಾಗಿದೆ. ಭೂಕಂಪದಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ

Leave a Reply

Your email address will not be published. Required fields are marked *