ರಷ್ಯಾ ತನ್ನ ನೆರೆಹೊರೆಯ ದೇಶದ ಮೇಲೆ ಆಕ್ರಮಣ ಮಾಡಿದ ತಕ್ಷಣ, ಭಾರತವು ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ದೊಡ್ಡ ವಿದ್ಯಾರ್ಥಿ ಜನಸಂಖ್ಯೆಯನ್ನು ತವರಿಗೆ ತರಲು ಕಾಯಬೇಕಾಯಿತು. ಅಲ್ಲಿಂದ ಜನರನ್ನು ಕರೆತರುವುದು ಸುಲಭದ ಮಾತಲ್ಲ. ಆದರೂ, ಯುದ್ಧ ಪೀಡಿತ ದೇಶದಿಂದ 22,500 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಯ್ತು. ಕಳೆದ ವರ್ಷ ಫೆಬ್ರವರಿ 24, 2022 ರಂದು ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ವಿಶ್ವದ ಎಲ್ಲಿಯಾದರೂ ನಡೆಸಿದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇನ್ನು, ಕೇಂದ್ರ ಸರ್ಕಾರದ ‘ಆಪರೇಷನ್ ಗಂಗಾ’ ಗೆ ದೇಶದ ಹೊರಗೆ ನೆಲೆಸಿರುವ ಭಾರತೀಯ ಸ್ನೇಹಿತರು ಸಹ ಸಹಾಯ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಭಾರತೀಯ ರಾಯಭಾರ ಕಚೇರಿಗಳ ನೇತೃತ್ವದ ಸರ್ಕಾರದ ಪ್ರಯತ್ನಗಳ ಜೊತೆಗೆ, ಹೊರದೇಶದಲ್ಲಿರೋ ಭಾರತೀಯರು ಸಹ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮೋದಿ ಸಹ ಮಾತನಾಡಿದ್ದು, “ಜಗತ್ತಿನಲ್ಲಿ ಭಾರತೀಯರು ಎಲ್ಲೇ ಇದ್ದರೂ, ಅವರ ಪಾಸ್‌ಪೋರ್ಟ್‌ಗಳ ಬಣ್ಣ ಬದಲಾಗಿದ್ದರೂ, ಅವರು ತಮ್ಮ ದೇಶದೊಂದಿಗೆ ರಕ್ತ ಸಂಬಂಧವನ್ನು ಹೊಂದಿದ್ದಾರೆ. ನಾವೆಲ್ಲರೂ ಭಾರತದೊಂದಿಗೆ ರಕ್ತದ ಮೂಲಕ ಸಂಪರ್ಕ ಹೊಂದಿದ್ದೇವೆ” ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ. ಎಂದು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಹೊರ ದೇಶದ ಭಾರತೀಯರ ಸಹಾಯದ ಬಗ್ಗೆ ಹೇಳಿದರು. ಈ ಬಗ್ಗೆ ಹಿಸ್ಟರಿ TV18 ‘ದಿ ಇವಾಕ್ಯುಯೇಶನ್ ಆಪರೇಷನ್ ಗಂಗಾ’ ಎಂಬ ಸಾಕ್ಷ್ಯಚಿತ್ರ ಮಾಡಿದ್ದು, ಜೂನ್ 17 ರಂದು ಪ್ರೀಮಿಯರ್‌ಪ್ರದರ್ಶನ ಹೊಂದಿದೆ. ಇದರಲ್ಲಿ, ಉಕ್ರೇನ್ ಮತ್ತು ಅದರ ನೆರೆಯ ದೇಶಗಳಾದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ರೊಮೇನಿಯಾದಲ್ಲಿ ನೆಲೆಸಿದ್ದ ಭಾರತೀಯ ವಲಸೆಗಾರರು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ತೋರಿಸಿದೆ. ಈ ಮೂಲಕ ವಸುಧೈವ ಕುಟುಂಬಕಂ ಅಂದರೆ ‘ಜಗತ್ತು ಒಂದೇ ಕುಟುಂಬ’ ಎಂಬ ಹಳೆಯ ಮೌಲ್ಯವನ್ನು ಪ್ರತಿಪಾದಿಸುತ್ತದೆ.ಎಂದು ಹೇಳಿದರು.