ಪವಿತ್ರ ರಂಜಾನ್ ಮಾಸದಲ್ಲಿ ಆಹಾರದ ಬಿಕ್ಕಟ್ಟಿನ ಜೊತೆಗೆ ಪ್ರಸ್ತುತ ತನ್ನ ಕೆಟ್ಟ ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ದೇಶ ಪಾಕಿಸ್ತಾನದಲ್ಲಿ ಈಗ ಮುಂಬರುವ ಖಾರಿಫ್ ಋತುವಿನಲ್ಲಿ ಭಾರಿ ನೀರಿನ ಕೊರತೆ ಉಂಟಾಗಲಿದೆ. ಈಗಾಗಲೇ ಆಹಾರ ಕೊರತೆಯಿಂದ ಸಂಕಷ್ಟದಲ್ಲಿರುವ ನೆರೆಯ ದೇಶದ ಜನತೆ ನೀರಿಗೂ ಪರದಾಡುವಂತಾಗಲಿದೆ. ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಾದ್ಯಂತ ಬಂದ ಭಾರೀ ಪ್ರವಾಹದಿಂದ ದೊಡ್ಡ ದೊಡ್ಡ ಭೂಪ್ರದೇಶಗಳೇ ಮುಳುಗಡೆಯಾಗಿದ್ದು, ಪ್ರವಾಹದಿಮದ ಚೇತರಿಕೊಳ್ಳಲು ಪ್ರಯತ್ನಿಸುತ್ತಿರುವ ನಾಡಿಗೆ ಆರ್ಥಿಕ ಕುಸಿತ ಮತ್ತಷ್ಟು ಪೆಟ್ಟು ನೀಡಿದೆ. ಈಗ ನೀರಿನ ಅಭಾವ ಮತ್ತೆ ಸಂಕಷ್ಟಕ್ಕೆ ನೂಕಲಿದೆ. ಈಗಾಗಲೇ ಕರಾಚಿ ಸುತ್ತಮುತ್ತ ನೀಎಇಗಾಘಿ ಜನರು ಪರದಾಡುತ್ತಿದ್ದಾರೆ.