ಶ್ರೀಲಂಕಾದಂತೆಯೇ ಪಾಕಿಸ್ತಾನದಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇಸ್ಲಾಮಾಬಾದ್‌ನಲ್ಲಿರುವ ಸರ್ಕಾರ ತನ್ನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿದೆ. ಜನರು ಕಳೆದ ಎರಡು ವರ್ಷಗಳಿಂದ ಗ್ಯಾಸ್ ಇಲ್ಲದೆ ಬದುಕುತ್ತಿದ್ದಾರೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿನ ಕೊರತೆಯಿಂದಾಗಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜನರು ಅಡುಗೆ ಅನಿಲವನ್ನು ಪ್ಲಾಸ್ಟಿಕ್ ಬಲೂನ್‌ಗಳು ಹಾಗೂ ಚೀಲಗಳಲ್ಲಿ ಸಂಗ್ರಹಿಸುತ್ತಿದ್ದಾರೆ.ಎಂದು ಸ್ಥಳೀಯ ಮಾಧ್ಯಮಗಳಲ್ಲಿನ ವರದಿಗಳು ಹೇಳಿವೆ.