ಆರ್ ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ ಬಿಡೋರು ಯಾರು? ಸಿದ್ದರಾಮಯ್ಯ ಜೋಶ್‍ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ: ಶಿವಲಿಂಗೇ ಗೌಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೋಶ್‍ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ವ್ಯಂಗ್ಯ.ನಾವು ಗ್ಯಾರಂಟಿ ಜಾರಿ ಮಾಡ್ತೇವೆ. ಕುಮಾರಸ್ವಾಮಿ ಅವರು ಸಾಲಮನ್ನಾ ಯೋಜನೆ ಜಾರಿ ತಂದ್ರು. ಅದು ಸರಿಯಾಗಿ ಜಾರಿ ಆಯ್ತಾ, ಸಾಲಮನ್ನಾ ಆಯ್ತಾ..?, ಇನ್ನೂ ಹಲವು ರೈತರಿಗೆ ಆ ಯೋಜನೆಯ ಸಾಲ ಮನ್ನಾ ಆಗಿಲ್ಲ. ಒಂದು ಹದಿನೈದು ದಿನ ಟೈಮ್ ಕೊಡಿ. ಮಾಡಲಿಲ್ಲ ಅಂದ್ರೆ ನಿಮ್ಮ ಜೊತೆ ನಾನು ಸೇರಿಕೊಳ್ಳುತ್ತೇನೆ. ಎಲ್ಲರಿಗೂ ಫ್ರೀ ಕೊಡಲು ಆಗಲ್ಲ. ಆರ್ ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ ಬಿಡೋರು ಯಾರು?. ಇವು ಬಿಪಿಎಲ್ ಕಾರ್ಡ್‍ದಾರರಿಗೆ ಕೊಡುವ ಯೋಜನೆಗಳು. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಜಾರಿ ಮಾಡ್ತೇವೆ ಐಎಎಸ್, ಐಪಿಎಸ್ ಅವರಿಗೆ ಅಲ್ಲ.. ಐದು ವರ್ಷಗಳ ಒಳಗೆ ಜಾರಿ ಮಾಡ್ತಾರೆ. ನಾನು ಮಿನಿಸ್ಟರ್ ಆಗಬೇಕಿತ್ತು. ಎಲ್ಲ ಹಣೆ ಬರಹ ಎಂದರು.

Leave a Reply

Your email address will not be published. Required fields are marked *