ಪ್ರವಾಸಿಗರ ಹಾಟ್‌ಸ್ಪಾಟ್ ಎಂದೇ ಖ್ಯಾತಿಯಾಗಿರುವ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ಬೀಚ್‌ನ ಸೀ ವರ್ಲ್ಡ್ ಥೀಮ್ ಪಾರ್ಕ್ ಬಳಿ ಎರಡು ಹೆಲಿಕಾಪ್ಟರ್‌ಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಮತ್ತೊಂದು ಹೆಲಿಕಾಪ್ಟರ್ ಸಂಪೂರ್ಣ ಛಿದ್ರ-ಛಿದ್ರವಾಗಿ, ಅವಶೇಷಗಳು ಮರಳಿನ ದಂಡೆಯ ಮೇಲೆ ಬಿದ್ದಿದೆ. ಹೆಲಿಕಾಪ್ಟರ್ ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಕ್ವೀನ್ಸ್‌ಲ್ಯಾಂಡ್‌ರಾಜ್ಯ ಪೊಲೀಸ್ ಕಾರ್ಯನಿರ್ವಾಹಕ ಇನ್ಸ್ಪೆಕ್ಟರ್ ಗ್ಯಾರಿ ವೊರೆಲ್ ವಿವರಿಸಿದ್ದಾರೆ.