ಮೋದಿ ವಿಷ ಸರ್ಪ ಎಂದು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.“ಕಾಂಗ್ರೆಸ್ ಪ್ರತಿಯೊಬ್ಬರನ್ನೂ ದ್ಷೇಷದಿಂದ ನೋಡುತ್ತದೆ. ಕಾಂಗ್ರೆಸ್ ನಾಯಕರು ಮತ್ತೆ ನನಗೆ ಬೈಯಲು ಶುರು ಮಾಡಿದ್ದಾರೆ. 91 ಸಲ ಬೇರೆ ಬೇರೆ ಬೈಗುಳಬೈದಿದ್ದಾರೆ. ಇದನ್ನು ಬಿಟ್ಟು ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ದೇಶಕ್ಕಾಗಿ ಕೆಲಸ ಮಾಡುವವರನ್ನು ಅಪಮಾನ ಮಾಡುವುದು ಕಾಂಗ್ರೆಸ್ ಇತಿಹಾಸ. ನನಗೆ ನೀವು ಬೈದ ದಿನವೇ ನೀವು ಎದ್ದು ನಿಲ್ಲದ ಹಾಗೇ ಜನರು ಶಿಕ್ಷೆ ನೀಡಿದ್ದಾರೆ. ಅಂಬೇಡ್ಕರ್ ಅವರಿಗೂ ಕಾಂಗ್ರೆಸ್ ಬೈದಿತ್ತು.. ರಾಕ್ಷಸ, ರಾಷ್ಟ್ರದ್ರೋಹಿ ಅಂತೆಲ್ಲ ಆ ಕಾಲದಲ್ಲಿ ಕಾಂಗ್ರೆಸ್ ಅಂಬೇಡ್ಕರ್‌ರನ್ನು ನಿಂದಿಸಿದೆ. ಇಂದು ವೀರ ಸಾವರ್ಕರ್‌ಗೂ ಬೈಯುತ್ತಿದೆ. ಈಗ ನನಗೆ ಬೈಯುವ ಮೂಲಕ ದೊಡ್ಡ ನಾಯಕ ಮಾಡುತ್ತಿದ್ದಾರೆ. ಕಾಂಗ್ರೆಸ್ ಬೈಯುತ್ತಿದೆ, ಆದರೆ ನಾನು ಜನರ ಸೇವೆಯಲ್ಲಿ ಮಗ್ನನಾಗಿದ್ದೇನೆ. ಈ ಬೈಗುಳ ಮಣ್ಣಲ್ಲಿಮಣ್ಣಾಗಿವೆ ಎಂದು ತಿರುಗೇಟು ಕೊಟ್ಟಿದ್ದಾರೆ.