ಹಿಂದಿ ಎನ್ನುವುದು ದೇಶದ ಯಾವುದೇ ಪ್ರಾದೇಶಿಕ ಭಾಷೆಗಳ ವಿರೋಧಿಯಲ್ಲ. ಹಿಂದಿ ದೇಶದ ಎಲ್ಲಾ ಭಾಷೆಗಳ ಸ್ನೇಹಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ಷಾ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್, ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ಮಾಡ್ಬೇಡಿ. ಹಿಂದಿ ರಾಷ್ಟ್ರ ಭಾಷೆ ಅಥವಾ ಏಕೈಕ ಅಧಿಕೃತ ಭಾಷೆ ಅಲ್ಲ. ನಾವು ಹಿಂದಿ ದಿನದ ಬದಲಿಗೆ ಭಾರತೀಯ ಭಾಷಾ ದಿನವನ್ನು ಆಚರಿಸಬೇಕು” ಎಂದು ಸ್ಟಾಲಿನ್ ಹೇಳಿದ್ದಾರೆ.