ಇಂಡೋನೆಷ್ಯಾದ ಜಾವಾದಲ್ಲಿ ನಡೆದ 5.6 ತೀವ್ರತೆ ಸಂಭವಿಸಿದ ಭೂಕಂಪಕ್ಕೆ ಹಲವು ಕಟ್ಟಡಗಳು ನೆಲಸಮವಾಗಿದ್ದು 40ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಈಗಾಗಲೇ 300ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ ಜರ್ಕಾತ್‍ನ ದಕ್ಷಿಣಆಗ್ನೇಯ ಭಾಗದ 75 ಕಿ.ಮೀ ವರೆಗೆ ಭೂಕಂಪ ಸಂಭವಿಸಿದ್ದು, ನೂರಾರು ಮನೆ, ಶಾಲೆಗಳಿಗೆ ಹಾನಿಯಾಗಿದ್ದು ಭೂಕಂಪ ಸಂಭವಿಸಿ 2 ಗಂಟೆಗಳ ಕಾಲ ಜನ ಭಯಭೀತರಾಗಿ ಇದ್ದ ಜಾಗದಲ್ಲೇ ಕೂತಿದ್ದಾರೆ.