ಇಂಡೋ-ಅಸಿಯಾನ್‌ಶೃಂಗದಲ್ಲಿ ಇಂಡಿಯಾ ಬದಲು ಭಾರತ ಎಂದು ತಮ್ಮ ಭಾಷಣದಲ್ಲಿ ಬಳಸಿ ಗಮನ ಸೆಳೆದರು ಮೋದಿ

ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ದಿಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆದ ಇಂಡೋ-ಅಸಿಯಾನ್‌ಶೃಂಗದಲ್ಲಿ ಇಂಡಿಯಾ ಬದಲು ಭಾರತ ಎಂದು ತಮ್ಮ ಭಾಷಣದಲ್ಲಿ ಬಳಸಿ ಗಮನ ಸೆಳೆದರು. 21ನೇ ಶತಮಾನ ನಮ್ಮದು ಎಂದ ಮೋದಿ, ಭಾರತ್‌ಹಾಗೂ ಆಸಿಯಾನ್‌ರಾಷ್ಟ್ರಗಳನ್ನು ಭೂಗೋಳ ಹಾಗೂ ಇತಿಹಾಸ ಒಂದುಗೂಡಿಸುತ್ತದೆ ಎಂದರು. ಭಾರತ ಮತ್ತು 10 ದೇಶಗಳ ಆಸಿಯಾನ್‌ನಡುವಿನ ಸಹಕಾರ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರು 12 ಅಂಶಗಳ ಪ್ರಸ್ತಾಪ ಮಂಡಿಸಿದ್ದಾರೆ. ಇವುಗಳಲ್ಲಿ ವ್ಯಾಪಾರ, ಡಿಜಿಟಲ್‌ರೂಪಾಂತರ ಹಾಗೂ ಸಾರಿಗೆ ಸಂಪರ್ಕ ಸೇರಿವೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಆಸಿಯಾನ್‌ಶೃಂಗದಲ್ಲಿ ಪ್ರಸ್ತಾವ ಮಂಡಿಸಿದ ಮೋದಿ, ‘ಕೋವಿಡ್‌ನಂತರ ವಿಶ್ವದಲ್ಲಿ ಬದಲಾವಣೆಯ ಅಗತ್ಯ ಇರುವ ಕಾರಣ ಈ ಅಂಶಗಳು ಮಹತ್ವದ್ದಾಗಿವೆ. ಮುಕ್ತ ಇಂಡೋ-ಪೆಸಿಫಿಕ್‌ವಲಯ ನಿರ್ಮಾಣವಾಗಬೇಕಿದೆ’ ಎನ್ನುವ ಮೂಲಕ ಈ ಸಮುದ್ರದಲ್ಲಿ ಏಕಸ್ವಾಮ್ಯಕ್ಕೆ ಯತ್ನಿಸುತ್ತಿರುವ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *