ಉಕ್ರೇನ್‌ನ 31ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಉಕ್ರೇನ್-ರಷ್ಯಾ ಯುದ್ಧಕ್ಕೆ 6 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ಆಯೋಜಿಸಿತ್ತು. ಒಟ್ಟು 15 ಸದಸ್ಯ ದೇಶಗಳ ಪೈಕಿ ಚೀನಾ ಮತದಾನಕ್ಕೆ ಗೈರಾದರೆ, ರಷ್ಯಾ ವಿಟೋ ಚಲಾಯಿಸಿತು. ಭಾರತ ಸೇರಿ 13 ದೇಶಗಳು ಉಕ್ರೇನ್ ಪರ ಮತ ಚಲಾಯಿಸಿದವು. ಉಕ್ರೇನ್‌ಅಧ್ಯಕ್ಷ ಝೆಲೆನ್ಸ್ಕಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲು ಭಾರತ ಬೆಂಬಲ ಸೂಚಿಸಿತು. ಈ ವರ್ಷದ ಡಿಸೆಂಬರ್‌ನಲ್ಲಿ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ. ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ.