ಇನ್ನು ಕೆಲವೇ ತಿಂಗಳುಗಳಲ್ಲಿ ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣಂ ಕಾರ್ಯನಿರ್ವಹಿಸಲಿದೆ. ಎಲ್ಲಾ ಕಾರ್ಯಕಲಾಪಗಳು ಅಲ್ಲಿಗೆ ವರ್ಗಾವಣೆ ಆಗಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್‌ಜಗನ್‌ಮೋಹನ್‌ರೆಡ್ಡಿ ಘೋಷಣೆ ಮಾಡಿದ್ದಾರೆ. ಜಾಗತಿಕ ಹೂಡಿಕೆದಾರರ ಶೃಂಗಸಭೆ ಮಂಗಳವಾರ ಹೊಸದಿಲ್ಲಿಯಲ್ಲಿ ಆಯೋಜಿಸಲಾದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. “ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ಮುಂದಿನ ತಿಂಗಳುಗಳಲ್ಲಿ ನಾನು ಕೂಡ ವೈಜಾಗ್‌ಗೆ ಶಿಫ್ಟ್ ಆಗುತ್ತೇನೆ. ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಲು ನಾನು ನಿಮ್ಮನ್ನು ಮತ್ತು ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ’. ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ಹಿನ್ನೆಲೆಯಲ್ಲಿ ಜಗನ್ ಅವರ ಈ ಮಾತುಗಳು ಬಂದಿದೆ. ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಲಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ರಾಜ್ಯ ಸರ್ಕಾರದ ರಾಜತಾಂತ್ರಿಕ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದ ಹಲವಾರು ಅಂತಾರಾಷ್ಟ್ರೀಯ ಗಣ್ಯರ ಸಮ್ಮುಖದಲ್ಲಿ ಈ ಹೇಳಿಕೆ ನೀಡಿದ್ದಾರೆ. ಶೃಂಗಸಭೆಯಲ್ಲಿ ಕೊರಿಯಾದ ಕಿಯಾ ಮೋಟಾರ್ಸ್‌ನ ಎಂಡಿ ಹಾಗೂ ಸಿಇಒ ಟೇ ಜಿನ್ ಪಾರ್ಕ್, ಜಪಾನ್‌ನ ಟೋರೇ ಇಂಡಸ್ಟ್ರೀಸ್‌ನ ಎಂಡಿ ಹಾಗೂ ಸಿಇಒ ಯಮಗುಚಿ, ಅಮೆರಿಕ ಮೂಲದ ಕಂಪನಿ ಕ್ಯಾಡ್ಬರಿಯ ಭಾರೀಯ ವಿಭಾಗದ ಅಧ್ಯಕ್ಷ ದೀಪಕ್ ಧರ್ನರಾಜನ್ ಅಯ್ಯರ್, ಇಟಲಿಯ ಎವರ್ಟನ್ ಟೀ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ರೋಶನ್‌ಗುಣವರ್ಧನ, ತೈವಾನ್‌ನ ಅಪಾಚೆ ಮತ್ತು ಹಿಲ್‌ಟಾಪ್‌ಗ್ರೂಪ್‌ನ ನಿರ್ದೇಶಕ ಸರ್ಗಿಯೋ ಲೀ, ಫ್ರಾನ್ಸ್‌ನ ಸೇಂಟ್-ಗೋಬೈನ್ ಇಂಡಸ್ಟ್ರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ಫಣಿ ಕುನಾರ್‌ಈ ವೇಳೆ ಹಾಜರಿದ್ದರು.