ಇನ್ಮುಂದೆ ಕೃತಕ ಬುದ್ಧಿಮತ್ತೆಗಳು ಶಿಕ್ಷಕರ ವೃತ್ತಿಯನ್ನೂ ಕಸಿದುಕೊಳ್ಳುತ್ತವೆ: AI ಗಳೇ ಮಕ್ಕಳಿಗೆ ಓದಲು, ಬರೆಯಲು ಹೇಳಿಕೊಡುತ್ತೆ!

ಈಗೀಗ ಎಲ್ಲಿ ನೋಡಿದ್ರೂ ಕೃತಕ ಬುದ್ದಿಮತ್ತೆ ಅಥವಾ ಎಐ ನದ್ದೇ ಕಾಲ. ಹಲವು ವೃತ್ತಿಗಳಲ್ಲಿ AI ತನ್ನ ಪ್ರಭಾವ ಬೀರುತ್ತಿದ್ದು, ಅನೇಕ ಜನರ ಕೆಲಸವನ್ನೇ ಕಿತ್ತುಕೊಳ್ಳುತ್ತಿದೆ. ಇನ್ಮುಂದೆ ಕೃತಕ ಬುದ್ಧಿಮತ್ತೆಗಳು ಶಿಕ್ಷಕರ ವೃತ್ತಿಯನ್ನೂ ಕಸಿದುಕೊಳ್ಳುತ್ತವೆ ಎನ್ನಲಾಗಿದೆ. ಬಿಲಿಯನೇರ್ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸ್ಯಾನ್ ಡಿಯಾಗೋದಲ್ಲಿ ಮಂಗಳವಾರ ನಡೆದ ASU+GSV ಶೃಂಗಸಭೆಯಲ್ಲಿ ಮುಖ್ಯ ಭಾಷಣದಲ್ಲಿ AI ಚಾಟ್‌ಬಾಟ್‌ಗಳು 18 ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಓದಲು ಮತ್ತು ಬರವಣಿಗೆಯ ಕೌಶಲ್ಯ ಕಲಿಸಿಕೊಡಲು ಮಕ್ಕಳಿಗೆ ಸಹಾಯ ಮಾಡಬಹುದು ಎಂದು ಹೇಳಿದರು. “AI ಗಳು ಆ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ, ಯಾವುದೇ ಮಾನವರು ಎಂದಿಗೂ ಸಾಧ್ಯವಾಗದಷ್ಟು ಉತ್ತಮ ಬೋಧಕರಾಗುತ್ತಾರೆ”. AI ಚಾಟ್‌ಬಾಟ್‌ಗಳಿಂದ ನಂಬಲಾಗದಷ್ಟು ಪ್ರಭಾವಿತರಾಗಿರುವ ಬಿಲ್‌ಗೇಟ್ಸ್‌, ತಂತ್ರಜ್ಞಾನವು ಹಿಂದೆಂದೂ ಸಾಧ್ಯವಾಗದ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಸುಧಾರಿಸಲು AI ಶೀಘ್ರದಲ್ಲೇ ಸಹಾಯ ಮಾಡುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *