ಭಾನುವಾರ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸುದೀರ್ಘ ಮೆರವಣಿಗೆ ಕಾರ್ಯಕ್ರಮವನ್ನು ವರದಿ ಮಾಡುತ್ತಿದ್ದ ಪಾಕಿಸ್ತಾನಿ ಮಹಿಳಾ ಪತ್ರಕರ್ತೆಯೊಬ್ಬರು ಖಾನ್ ಅವರಿದ್ದ ಮೆರವಣಿಗಾಗಿ ಹೊರಟಿದ್ದ ಟ್ರಕ್ ಆಕೆಯ ಮೇಲೆ ಹರಿದಿದೆ. ಟ್ರಕ್‌ನಡಿ ಸಿಲುಕಿ ಸಾವನ್ನಪ್ಪಿದ್ದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ತಮ್ಮ ಸುದೀರ್ಘ ಮೆರವಣಿಗೆಯನ್ನು ನಿಲ್ಲಿಸಿದ್ದಾರೆ. ಮೃತರನ್ನು ಚಾನೆಲ್ ಫೈವ್ ವರದಿಗಾರ್ತಿ ಸದಾಫ್ ನಯೀಮ್ ಎಂದು ಗುರುತಿಸಲಾಗಿದೆ. “ಇಂದು ನಮ್ಮ ಚಾನೆಲ್ ವರದಿಗಾರ್ತಿ ಸದಾಫ್ ನಯೀಮ್ ಸಾವಿಗೆ ಕಾರಣವಾದ ಭೀಕರ ಅಪಘಾತವಾಗಿದೆ ಮತ್ತು ತೀವ್ರ ದುಃಖವಾಗಿದೆ” ಎಂದು ಖಾನ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.