ಇಮ್ರಾನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದು, ಉಗ್ರರಿಗೆ ಮನೆಯೊಳಗೆ ಜಾಗ ಕೊಟ್ಟಿದ್ದಾರೆ ಅನ್ನೋ ಆರೋಪದಡಿ ಅರೆಸ್ಟ್ ಆಗುವ ಸೂಚನೆ ಸಿಕ್ಕಿದೆ. ಕಳೆದವಾರ ಅರೆಸ್ಟ್ ಆಗಿದ್ದ ಇಮ್ರಾನ್ ಶನಿವಾರ ತಾನೆ ರಿಲೀಸ್ ಆಗಿದ್ದಾರೆ. ಹೀಗಿದ್ದಾಗ ಮತ್ತೊಮ್ಮೆ ಏನಾದ್ರು ಮಾಡಿ ಇಮ್ರಾನ್‌ಗೆ ಜೈಲು ತೋರಿಸಬೇಕು ಅಂತಾ ಪಾಕಿ ಸರ್ಕಾರ ಪಣತೊಟ್ಟಿದೆ. ಹೀಗಾಗಿ ಒಂದು ಅಡ್ಡದಾರಿ ಹುಡುಕಿ ಇಮ್ರಾನ್ ಖಾನ್ ಲಾಕ್ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದರಲ್ಲಿ ಭಯೋತ್ಪಾಕ ಅಸ್ತ್ರ ಕೂಡ ಒಂದಾಗಿದ್ದು, ಇಮ್ರಾನ್ ಮನೆಯೊಳಗೆ 40 ಉಗ್ರರು ಅಡಗಿದ್ದಾರೆ ಎಂದು ಸುದ್ದಿ ಸಂಚಲನ ಸೃಷ್ಟಿ ಮಾಡಿ ಖಾನ್ ಮನೆಯ ಸುತ್ತಲೂ ಸಾವಿರಾರು ಪೊಲೀಸ್ ಪಡೆ ಒಂದೇ ಬಾರಿ ನುಗ್ಗಿರುವ ವಿಡಿಯೋ ವೈರಲ್ ಆಗಿದೆ.