ಕಳೆದ 6 ತಿಂಗಳಿನಿಂದ ಇರಾನ್ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರಿಗೆ ಈ ಹೊಸ ಕಾನೂನು ಇನ್ನೊಂದು ತಲೆಬಿಸಿ ತಂದಿದೆ. ಇನ್ನು ಮುಂದೆ ಇರಾನ್ನಲ್ಲಿ ಮಹಿಳೆಯರು ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್ಇಲ್ಲದೇ ಬಂದಲ್ಲಿ, ಅವರಿಗೆ ಗರಿಷ್ಠ 49 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಇರಾನ್ನ ಸಂಸದ ಹೊಸೈನಿ ಜಲಾಲಿ ಇದನ್ನು ಖಚಿತಪಡಿಸಿದ್ದಾರೆ. ದಂಡದ ಹೊರತಾಗಿ, ಮಹಿಳೆಯರು ಹೊಸ ಡ್ರೆಸ್ ಕೋಡ್ ಅನ್ನು ಅನುಸರಿಸದಿದ್ದರೆ, ಅವರ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಲಾಗುವುದು ಮತ್ತು ಇಂಟರ್ನೆಟ್ ಬಳಸುವುದನ್ನು ನಿಷೇಧಿಸಲಾಗುವುದು ಎಂದು ಜಲಾಲಿ ಹೇಳಿದ್ದಾರೆ.