ಇವಿಎಂನಲ್ಲಿ ದೋಷ ಕಂಡುಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್‌ಗಳನ್ನು ನಿಯೋಜನೆ ಮಾಡಲಾಗಿದೆ; ತುಷಾರ್ ಗಿರಿನಾಥ್

ಕರ್ನಾಟಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ಮೇ 10ರಂದು ರಾಜ್ಯದೆಲ್ಲೆಡೆ ಶಾಂತಿಯುತ ಮತ್ತು ಪಾರದರ್ಶಕ ಮತದಾನ ನಡೆಸಲು ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 1.56 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. “ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ)ನಲ್ಲಿ ದೋಷ ಕಂಡುಬರಲ್ಲ. ಆ ರೀತಿ ಏನಾದರೂ ದೋಷ ಕಂಡುಬಂದರೆ, ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್‌ಗಳನ್ನು ನಿಯೋಜನೆ ಮಾಡಲಾಗಿದೆ. 30 ನಿಮಿಷಗಳಲ್ಲಿ ಇವಿಎಂ ಸರಿ ಮಾಡುವಂತಹ ಕೆಲಸ ಮಾಡಲಾಗುವುದು,” ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಮಂಗಳವಾರ ಸಂಜೆ ಚುನಾವಣಾ ಸಿಬ್ಬಂದಿ ತೆರಳಲಿದ್ದಾರೆ. 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ, ಮಾಸ್ಟರಿಂಗ್ ಸೆಂಟರ್‌ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಲಿದ್ದೇವೆ. ನಾವು ಈಗಾಗಲೇ ರೂಟ್ ಮ್ಯಾಪ್ ತಯಾರಿ ಮಾಡಿದ್ದೇವೆ,”. ಒಂದು ಬಸ್‌ನಲ್ಲಿ ಐದರಿಂದ ಆರು ಮತ‌ಗಟ್ಟೆಗಳಿಗೆ ಸಂಬಂಧಿಸಿದ ಚುನಾವಣಾ ಸಿಬ್ಬಂದಿಯನ್ನು ಡ್ರಾಪ್ ಮಾಡಲಾಗುವುದು ಬುಧವಾರ ಬೆಳಗ್ಗೆ ಮತಗಟ್ಟೆಗಳಲ್ಲಿ 6 ಗಂಟೆಗೆ ಅಣಕು ಮತದಾನ ನಡೆಸಲಿದ್ದಾರೆ. ನಂತರ ಏಳು ಗಂಟೆಗೆ ಮತದಾನ ಆರಂಭವಾಗಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *