ಇಸ್ರೇಲ್ಹಮಾಸ್ಮಧ್ಯೆ ಯುದ್ಧ ಆರಂಭವಾಗಿ 18 ದಿನಗಳು ಕಳೆದಿದೆ. ಹೀಗಿದ್ದರೂ ಇನ್ನೂ ಯಾಕೆ ಗಾಜಾ ಮೇಲೆ ಭೂ ದಾಳಿ ನಡೆಸಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಮಾಸ್ದಾಳಿ ನಡೆಸಿದ ನಂತರ ಇಸ್ರೇಲ್ನಿರಂತರವಾಗಿ ಏರ್ಸ್ಟ್ರೈಕ್ಮಾಡಿ ಹಮಾಸ್ನೆಲೆಗಳನ್ನು ಧ್ವಂಸ ಮಾಡುತ್ತಿದೆ. ಕಳೆದ ವಾರದಿಂದ ಏರ್ಸ್ಟ್ರೈಕ್ಜೊತೆಗೆ ಭೂ ದಾಳಿಗೆ ಇಸ್ರೇಲ್ಸಜ್ಜಾಗುತ್ತಿದೆ ಎಂಬ ಮಾಹಿತಿಗಳು ಬರುತ್ತಿದ್ದವು. ಆದರೆ ಇನ್ನೂ ಇಸ್ರೇಲ್ಭೂ ದಾಳಿ ನಡೆಸದೇ ಇರುವುದಕ್ಕೆ ವಿಶ್ವಾಸದ ಬಿಕ್ಕಟ್ಟು ಕಾರಣವಂತೆ.ಮುಖ್ಯವಾದ ವಿಷಯಗಳ ಬಗ್ಗೆ ಪ್ರಮುಖರು ಒಮ್ಮತದಿಂದ ಒಪ್ಪಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಹಮಾಸ್ಅಕ್ಟೋಬರ್7ರಂದು ನಡೆಸಿದ ದಾಳಿಯಿಂದಾಗಿ ನೆತನ್ಯಾಹು ಸೇನೆಯ ಜನರಲ್ಗಳ ಮೇಲೆ ಬಹಳ ಸಿಟ್ಟಾಗಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ದಾಳಿಯ ಮಾಹಿತಿ ಗೊತ್ತಾಗದೇ ಇರುವುದು ಸೇನೆಯ ಗಂಭೀರ ವೈಫಲ್ಯ ಎಂದು ನೆತನ್ಯಾಹು ದೂಷಿಸಿದ್ದಾರೆ ಎಂದು ಬರಹದಲ್ಲಿ ಉಲ್ಲೇಖಿಸಿದ್ದಾರೆ.ವಿಶೇಷವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ನಡುವೆ ಭಿನ್ನಾಭಿಪ್ರಾಯ ಎದ್ದಿದೆ. ದಾಳಿಯ ವೈಫಲ್ಯದ ಬಗ್ಗೆ ಸೇನೆಯ ಪ್ರಧಾನ ಮತ್ತು ಹಿರಿಯ ಶ್ರೇಣಿಯ ಅಧಿಕಾರಿಗಳು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಇಸ್ರೇಲ್ಇನ್ನೂ ಗಾಜಾದ ಮೇಲೆ ಭೂ ದಾಳಿ ನಡೆಸಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಿದ್ದಾರೆ.