ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈದ್ಗಾ ಮೈದಾನ ನಿಮ್ಮ ಪಿತ್ರಾರ್ಜಿತ ಆಸ್ತಿನೂ ಅಲ್ಲ, ವಕ್ಫ್ ಬೋರ್ಡ್‍ಗೆ ಸೇರಿದ್ದೂ ಅಲ್ಲ, ಮುಸ್ಲಿಂ, ಹಿಂದೂಗಳಿಗೆ ಸೇರಿದ್ದೂ ಅಲ್ಲ. ಅದು ಸರ್ಕಾರದ ಜಾಗ, ಸರ್ಕಾರಿ ಜಾಗದಲ್ಲಿ ವರ್ಷಕ್ಕೆ 2 ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ, ಹಾಗಾದರೆ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ, ನೀವು ಮುಸ್ಲಿಂರಿಂದ ಮಾತ್ರ ಗೆದ್ದಿಲ್ಲ, ನಿಮಗೆ ಹಿಂದೂಗಳೂ ವೋಟು ಹಾಕಿದ್ದಾರೆ ನೀವು ಚಾಮರಾಜಪೇಟೆ ಶಾಸಕ, ನೆನೆಪಿಟ್ಟುಕೊಳ್ಳಿ ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದು. ಈಗ ಹೇಳಿರುವ ಹೇಳಿಕೆಯನ್ನು ನೀವು ವಾಪಸ್ ಪಡೆಯಬೇಕು, ಹಿಂದೂಗಳಿಗೆ ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದರು. ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತೇವೆ. ತಾಕತ್ತಿದ್ದರೆ ಅದನ್ನು ವಿರೋಧಿಸಿ.ಮುಂಬರುವ ಚುನಾವಣೆಯಲ್ಲಿ ಜಮೀರ್‍ನನ್ನು ಹಿಂದೂಗಳು ಸೋಲಿಸಬೇಕು ಎಂದು ಹೇಳಿದರು.