ಈ ಬಜೆಟ್‌ಬಡವರು, ಗ್ರಾಮಸ್ಥರು,ರೈತರು, ಮತ್ತು ಮಧ್ಯಮ ವರ್ಗದ ಕನಸುಗಳನ್ನು ನನಸು ಮಾಡಲಿದೆ: ಮೋದಿ ಮೆಚ್ಚುಗೆ

ನಿರ್ಮಲಾ ಸೀತಾರಾಮನ್‌ಮಂಡಿಸಿದ ಬಜೆಟ್‌ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಜೆಟ್‌ಸದೃಢವಾದ ನವ ಭಾರತವನ್ನು ನಿರ್ಮಿಸಲು ಗಟ್ಟಿಯಾದ ಅಡಿಪಾಯವನ್ನು ಹಾಕುತ್ತದೆ. ಬಡವರು, ಗ್ರಾಮಸ್ಥರು, ರೈತರು ಮತ್ತು ಮಧ್ಯಮ ವರ್ಗದ ಕನಸುಗಳನ್ನು ನನಸಾಗಿಸುತ್ತದೆ ಎಂದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರ ಜೀವನವನ್ನು ಸುಲಭಗೊಳಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಹಿಳಾ ಸ್ವಸಹಾಯ ಸಂಘಗಳು ಅವರನ್ನು ಮತ್ತಷ್ಟು ಹೆಚ್ಚಿಸಲಿವೆ. ಮನೆಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಉಳಿತಾಯ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *