ರಷ್ಯಾ ಹಾಗೂ ಉಕ್ರೇನ್‌ನಡುವೆ 16 ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ಅತ್ಯಂತ ಭೀಕರ ಘಟನೆಯೊಂದು ಸಂಭವಿಸಿದ್ದು, ದಕ್ಷಿಣ ಉಕ್ರೇನ್‌ನ ಖೇರ್ಸನ್‌ಬಳಿ ರಷ್ಯಾದ ವಶದಲ್ಲಿದ್ದ ಸೋವಿಯತ್‌ಕಾಲದ ಬೃಹತ್‌ಕಖೋವ್ಕಾ ಅಣೆಕಟ್ಟೆಸ್ಫೋಟಗೊಂಡಿದೆ. ಪರಿಣಾಮ, ಖೇರ್ಸನ್‌ಹಾಗೂ ಕ್ರಿಮಿಯಾದ ಸುಮಾರು 100 ಹಳ್ಳಿ ಹಾಗೂ ಪಟ್ಟಣಗಳು ಮುಳುಗಡೆ ಭೀತಿ ಎದುರಿಸುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಕೂಡಲೇ ಜಾಗ ಖಾಲಿ ಮಾಡಬೇಕೆಂದು ಎರಡೂ ದೇಶಗಳು ಆದೇಶ ಹೊರಡಿಸಿವೆ. ಜನರು ಜೀವ ಉಳಿಸಿಕೊಳ್ಳಲು ಊರು ತೊರೆಯುತ್ತಿದ್ದಾರೆ. ಅಣೆಕಟ್ಟೆಇರುವ ನೋವಾ ಕಖೋವ್ಕಾ ಊರು ಈಗಾಗಲೇ ಮುಳುಗಿದೆ. ರಷ್ಯಾ ಈ ಡ್ಯಾಂ ಹಾಗೂ ಜಲವಿದ್ಯುತ್‌ಉತ್ಪಾದನೆ ಘಟಕವನ್ನು ಉದ್ದೇಶಪೂರ್ವಕವಾಗಿ ಸ್ಫೋಟಿಸಿದೆ ಎಂದು ಉಕ್ರೇನ್‌ಆರೋಪಿಸಿದ್ದರೆ, ಉಕ್ರೇನ್‌ದೇಶವೇ ಇದನ್ನು ಸ್ಫೋಟಿಸಿದೆ ಎಂದು ರಷ್ಯಾ ಆರೋಪಿಸಿದೆ. ಡ್ಯಾಂ ಧ್ವಂಸದಿಂದ ಯಾವ ದೇಶಕ್ಕೆ ಅನುಕೂಲವಾಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.ಎರಡೂ ದೇಶಗಳ ವಶದಲ್ಲಿರುವ ಊರುಗಳು ಇದರಿಂದಾಗಿ ಮುಳುಗಲಿವೆ. ಜೊತೆಗೆ, 2014ರಿಂದ ರಷ್ಯಾದ ವಶದಲ್ಲಿರುವ ಉಕ್ರೇನ್‌ನ ಕ್ರಿಮಿಯಾ ಪ್ರದೇಶಕ್ಕೆ ಕುಡಿಯುವ ನೀರಿನ ಪೂರೈಕೆ ನಿಲ್ಲಲಿದೆ. ಹಾಗೆಯೇ ಉಕ್ರೇನ್‌ನಲ್ಲಿ ರಷ್ಯಾದ ವಶದಲ್ಲಿರುವ ಯುರೋಪ್‌ನ ಅತಿದೊಡ್ಡ ಝಪೋರಿಜಿಯಾ ಅಣುಸ್ಥಾವರ ಇದರಿಂದ ಅಪಾಯಕ್ಕೆ ಸಿಲುಕಿದೆ. ಈ ಅಣುಸ್ಥಾವರದ ಕೂಲಿಂಗ್‌ವ್ಯವಸ್ಥೆಗೆ ಡ್ಯಾಂ ನೀರು ಬಳಕೆಯಾಗುತ್ತಿತ್ತು.ಡ್ಯಾಂ ಸ್ಫೋಟದ ಬೆನ್ನಲ್ಲೇ ಎರಡೂ ದೇಶಗಳು ತುರ್ತು ಸಭೆಗಳನ್ನು ನಡೆಸಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಈ ದುರ್ಘಟನೆಯಿಂದ ಉಕ್ರೇನ್‌ನಲ್ಲಿ ಪರಿಸರ ಹಾಗೂ ಜೀವವ್ಯವಸ್ಥೆಗೆ ಸಂಬಂಧಿಸಿದ ಬಹುದೊಡ್ಡ ಆಪತ್ತು ಎದುರಾಗಲಿದೆ. ಮುಂದಿನ ಕೆಲ ಗಂಟೆಗಳಲ್ಲಿ ಸಾವಿರಾರು ಜನರು, ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಸಾಧ್ಯತೆಯಿದೆ ಎನ್ನಲಾಗಿದೆ.