ಉಕ್ರೇನ್‌ನಲ್ಲಿ ನಡೆದ ಮಕ್ಕಳ ಅಪಹರಣ ಹಾಗೂ ಯುದ್ಧ ಅಪರಾಧಗಳ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬಂಧಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಾರೆಂಟ್ ಹೊರಡಿಸಿದೆ. ನ್ಯಾಯಾಲಯವು ತನ್ನ ವಾರೆಂಟ್‌ನಲ್ಲಿ, ಉಕ್ರೇನಿನಿಂದ ಮಕ್ಕಳನ್ನು ಅಕ್ರಮವಾಗಿ ಗಡಿಪಾರು ಮಾಡುವ ಮತ್ತು ರಷ್ಯಾದ ಒಕ್ಕೂಟಕ್ಕೆ ಜನರನ್ನು ಅಕ್ರಮವಾಗಿ ವರ್ಗಾಯಿಸಿದ ಯುದ್ಧಾಪರಾಧಕ್ಕೆ ಪುಟಿನ್ ಜವಾಬ್ದಾರಿಯಾಗಿದ್ದಾರೆ. ಜನರನ್ನು ಕಾನೂನು ಬಾಹಿರವಾಗಿ ವರ್ಗಾಯಿಸಿರುವುದಕ್ಕೆ ಆಧಾರಗಳಿವೆ.ರಷ್ಯಾದ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನೂ ಬಂಧಿಸಲು ವಾರೆಂಟ್ ಹೊರಡಿಸಿದೆ. ಆದರೆ ಈ ಆರೋಪವನ್ನು ಮಾಸ್ಕೋ ತಳ್ಳಿಹಾಕಿದೆ. ರಷ್ಯಾದ ಸೇನಾಪಡೆಗಳು ದೌರ್ಜನ್ಯ ಎಸಗಿಲ್ಲ ಎಂದು ಹೇಳಿದೆ.