ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿ 600ಕ್ಕೂ ಹೆಚ್ಚು ಸೈನಿಕರ ಹತ್ಯೆ ನಡೆದಿದೆ ಎಂದು ರಷ್ಯಾ ಸೈನ್ಯ ಹೇಳಿಕೊಂಡಿದೆ. ಆದರೆ ಉಕ್ರೇನ್ ಇದು ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್‌ನಲ್ಲಿರುವ ಎರಡು ಬ್ಯಾರಕ್‍ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಉಕ್ರೇನ್ ಸೈನ್ಯ ಸ್ಪಷ್ಟಪಡಿಸಿದೆ. ಕೆಲ ದಿನಗಳ ಹಿಂದೆ ಉಕ್ರೇನ್ ಸೈನ್ಯ ರಷ್ಯಾದ ಸೈನಿಕರ ಬ್ಯಾರಕ್ ಮೇಲೆ ದಾಳಿ ನಡೆಸಿ 89 ಸೈನಿಕರ ಸಾವಿಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ರಷ್ಯಾ ಸೈನ್ಯ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಉಕ್ರೇನ್ ಸೈನ್ಯದ ಅಧಿಕಾರಿಗಳು ರಷ್ಯಾ ದಾಳಿ ನಡೆಸಿರುವುದು ನಿಜ ಆದರೆ ನಮ್ಮ ಕಟ್ಟಡ ಸಹಿತ ಕೆಲ ಪ್ರದೇಶಗಳಿಗೆ ಹಾನಿಯಾಗಿದೆ. ಆದರೆ ನಮ್ಮ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ತಿಳಿಸಿದೆ.