ಉಕ್ರೇನ್ ರಾಜಧಾನಿ ಕೀವ್‌ನ ಕಿಂಡರ್‌ಗಾರ್ಟನ್ ಬಳಿ ಹೆಲಿಕಾಪ್ಟರೊಂದು ಪತನಗೊಂಡಿದ್ದು, ದುರಂತದ ವೇಳೆ ಮಕ್ಕಳು ಮತ್ತು ಉದ್ಯೋಗಿಗಳು ಶಿಶುವಿಹಾರದಲ್ಲಿದ್ದರು ಉಕ್ರೇನ್ ಅಂತರಿಕ ವ್ಯವಹಾರಗಳ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಇತರ ಅಧಿಕಾರಿಗಳು ಸೇರಿದಂತೆ 16 ಜನ ಪ್ರಾಣಬಿಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ಎಂದು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ಮಾಹಿತಿ ನೀಡಿದ್ದಾರೆ.