ರಾಜ್ಯದ ಬಡ, ಮಧ್ಯಮವರ್ಗದವರನ್ನ ಗಮನದಲ್ಲಿಟ್ಟುಕೊಂಡು ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾಗಿ ಚುನಾವಣಾಪೂರ್ವದಲ್ಲಿ ರಾಜ್ಯ ಕಾಂಗ್ರೆಸ್ ಭರವಸೆಯನ್ನ ನೀಡಿತ್ತು. ಇದೀಗ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸೂಚಿಸಿದ್ದು, ಅನುಷ್ಠಾನ ಹಂತದಲ್ಲಿರುವಾಗಲೇ ನೂತನ ಸರ್ಕಾರದ ಭಾಗವಾಗಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ನೀಡಿರುವ ಸ್ಫೋಟಕ ಹೇಳಿಕೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್, ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡಲು ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು ಅನ್ನುವ ದೃಷ್ಟಿ ಬಂದಾಗ ಆವತ್ತಿಗೆ ರಿಸಲ್ಟ್ ಅನಿವಾರ್ಯ ಆಗುತ್ತದೆ. ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯಲಾರಿಟಿ, ಇಲ್ಲದ್ದು ಸಲ್ಲದ್ದು ಎಲ್ಲ ಮಾಡ್ತೀವಿ. ಬಟ್ ನಮ್ಮ ಮನಸಿಗೆ, ಸಿದ್ದರಾಮಯ್ಯನವರ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ ಕೆಲವೊಂದನ್ನು ಮಾಡಿಕೊಂಡು ಹೋಗಬೇಕಾಗುತ್ತದೆ. ಕೆಲವನ್ನು ಆ್ಯಕ್ಸೆಪ್ಟ್ ಮಾಡಬೇಕಾಗುತ್ತದೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.