ಉಡುಪಿ ಕಾಲೇಜು ಪ್ರಕರಣ ಸಂಬಂಧಿಸಿದಂತೆ ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ: 14 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್ ದಾಖಲು

ಉಡುಪಿ ಕಾಲೇಜು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಸದಾಶಿವನಗರದಲ್ಲಿ ನಿವಾಸಕ್ಕೆ ಗುರುವಾರ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಅಕ್ರಮವಾಗಿ ಗುಂಪುಗೂಡಿ ಕಾನೂನು & ಸುವ್ಯವಸ್ಥೆಗೆ ಭಂಗವುಂಟಾಗುವ ರೀತಿಯಲ್ಲಿ ಪ್ರತಿಭಟನೆ ಮಾಡಿರುವ 14 ಜನ ಬಿ.ಜೆ.ಪಿ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಘಟನೆಯ ಮರುದಿನವೇ 14 ಕಾರ್ಯಕರ್ತರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ.ಇನ್ನೂ ಈ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್‌ಮಾತನಾಡಿ, ನಾನು, ನೀವು ಕಾಲೇಜು ಹೋಗಿದ್ದವರು. ಸ್ನೇಹಿತರ ನಡುವೆ ಕೆಲ ಘಟನೆ ನಡೆಯುತ್ತೆ. ಅದನ್ನು ಎಲ್ಲಿಗೋ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇಂತಹ ಘಟನೆ ನಡೆದರೆ ಅದರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದುನ್ನು ಕಾಲೇಜಿನ ಪ್ರಾಂಶುಪಾಲರಿಗೆ ಬಿಡಬೇಕು. ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಈಗಾಗಲೇ ಅಮಾನತು ಮಾಡಿದ್ದಾರೆ. ಅದನ್ನು ಮೀರಿದ ಘಟನೆಯಾದ್ರೆ ನಾವು ಮಧ್ಯಪ್ರದೇಶ ಮಾಡಬಹುದು ಎಂದು ಹೇಳಿದ್ದರು.

Leave a Reply

Your email address will not be published. Required fields are marked *